ಕೇರಳ ಪ್ರವೇಶಿಸಿದ ಮುಂಗಾರು ➤ ವಿಳಂಬವಾದರೂ ಕರ್ನಾಟಕದಲ್ಲಿ ವಾಡಿಕೆಯ ಮಳೆ ನಿರೀಕ್ಷೆ..!

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಜೂ. 08. ಇಂದು ಕೇರಳಕ್ಕೆ ಮಾನ್ಸೂನ್ ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಪ್ರತೀ ವರ್ಷ ಜೂನ್ 1 ರಂದು ಕೇರಳಕ್ಕೆ ಮುಂಗಾರು ಆಗಮಿಸುತ್ತಿದ್ದು, ಈ ವರ್ಷ 7 ದಿನ ತಡವಾಗಿ ಮುಂಗಾರು ಆಗಮಿಸಿದೆ.


ಇಂದು ಬೆಳಗ್ಗೆಯಿಂದಲೇ ಕೇರಳದ ಎಲ್ಲಾ ಭಾಗಗಳಲ್ಲಿ ಮಳೆ ಆರಂಭವಾಗಿದ್ದು, ಪ್ರತಿ ವರ್ಷವೂ ಜೂನ್ 1ರಂದು ಮುಂಗಾರು ಮಾರುತಗಳು ಕೇರಳಕ್ಕೆ ಆಗಮಿಸುತ್ತಿದ್ದವು. ಅದಾದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕದಲ್ಲಿ ಕೂಡಾ ಮಳೆ ಆರಂಭವಾಗುತ್ತಿತ್ತು. ಆದರೆ ಇದೀಗ ಮುಂಗಾರು ಒಂದು ವಾರ ತಡವಾಗಿದ್ದರೂ ಕೂಡ ಬಿಪರ್​ಜಾಯ್ ಚಂಡಮಾರುತದಿಂದಾಗಿ ಮಳೆಯ ಪ್ರಭಾವ ಹೆಚ್ಚಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 35-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

Also Read  ನೆಲ್ಯಾಡಿ: ಟ್ಯಾಂಕರ್ ಪಲ್ಟಿ - ಗ್ಯಾಸ್ ಸೋರಿಕೆ ➤ ಉಪ್ಪಿನಂಗಡಿ - ನೆಲ್ಯಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

error: Content is protected !!
Scroll to Top