➤ ಉಳ್ಳಾಲ: ತಲವಾರಿನಿಂದ ಕಡಿದು ಕೊಲೆಗೆ ಯತ್ನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 08. ಮನೆಯಲ್ಲಿರಲು ನಿರಾಕರಿಸಿದ ಹಿನ್ನೆಲೆ ವ್ಯಕ್ತಿಯೋರ್ವನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಕೋಟೆಕಾರು ಗ್ರೌಂಡ್‌ ಬಳಿ ನಡೆದಿದೆ.

ಹಲ್ಲೆಗೊಳಗಾದವರನ್ನು ಅಬೂಬಕರ್‌ ಸಿದ್ದೀಖ್‌ ಎಂದು ಗುರುತಿಸಲಾಗಿದೆ. ಆರೋಪಿ ಮಂಜೇಶ್ವರ ಪಾವೂರು ಗುಂಡಾಪು ನಿವಾಸಿ ಉಮ್ಮರ್‌ ನವಾಫ್‌ ಎಂದು ಗುರುತಿಸಲಾಗಿದೆ. ಈತ ರಾತ್ರಿ 11ರ ವೇಳೆಗೆ ಪರಿಚಿತರೇ ಆಗಿರುವ ಅಬೂಬಕರ್‌ ಸಿದ್ದೀಖ್‌ ರವರಿಗೆ ಕರೆ ಮಾಡಿ ಅರ್ಜೆಂಟಾಗಿ ಕೋಟೆಕಾರು ಗ್ರೌಂಡಿಗೆ ಬರುವಂತೆ ತಿಳಿಸಿದ್ದ. ಅದರಂತೆ ನಡೆದುಕೊಂಡು ಹೋದ ಅಬೂಬಕರ್‌ ರವರು ಅಜ್ಜಿನಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಬೈಕಿನಲ್ಲಿ ಬಂದಿದ್ದ ಉಮ್ಮರ್‌ ನವಾಫ್‌, ಅವರನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಕೋಟೆಕಾರು ಗ್ರೌಂಡಿಗೆ ಕರೆತಂದು, ಅಲ್ಲಿ ಪೂರ್ವನಿಯೋಜಿತವಾಗಿ ತಂದಿದ್ದ ತಲವಾರು ಮೇಲಕ್ಕೆತ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ “ನಿನ್ನ ಮನೆಯಲ್ಲಿ ನಾನು ಇರಬಾರದಾ, ನೀನು ಯಾರಿಗೆ ಹೆದರುವುದು?, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ತಲವಾರಿನಿಂದ ಕುತ್ತಿಗೆಗೆ ಬೀಸಿದ್ದಾನೆ. ತಕ್ಷಣವೇ ಅಬೂಬಕರ್ ರವರು ತಪ್ಪಿಸಿಕೊಂಡ ಕಾರಣ ಅವರ ಬಲಭುಜಕ್ಕೆ ಏಟು ಬಿದ್ದು, ಬಲಹಣೆ, ಎಡಕೈ, ಬಲಕೈ ಹಾಗೂ ಭುಜಕ್ಕೆ ಕಡಿದ ರಕ್ತದ ಗಾಯಗಳಾಗಿದೆ.

Also Read  ಕಡಬ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಮರ್ಧಾಳದಲ್ಲಿ ರಕ್ತದಾನ ಶಿಬಿರ

ಅಬೂಬಕರ್‌ ಸಿದ್ದೀಖ್‌ ಅವರು ಬೊಬ್ಬೆ ಹಾಕಿದಾಗ ಘಟನ ಸ್ಥಳಕ್ಕೆ ಜನ ಓಡಿಕೊಂಡು ಬರುವುದನ್ನು ಗಮನಿಸಿ, ಉಮ್ಮರ್‌ ನವಾಫ್‌, ಅಬೂಬಕರ್‌ ಅವರಿಗೆ ಸೇರಿದ ಮೊಬೈಲನ್ನು ಪುಡಿಗೈದು, ಸಹೋದರ ಉಮ್ಮರ್‌ ಫಾರೂಕ್‌ನಿಗೂ ಇದೇ ರೀತಿಯಾಗಿ ಕೊಲ್ಲುವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾನೆ. ಗಾಯಾಳುವನ್ನು ಸ್ಥಳೀಯರೊಬ್ಬರು ಕಾರಿನಲ್ಲಿ ದೇರಳಕಟ್ಟೆ ಯೇನಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಅ. 2 ಗಾಂಧಿಜಯಂತಿ ದಿನಾಚರಣೆ ➤ ಮಕ್ಕಳಿಗೆ ವಿವಿಧ ಸ್ಪರ್ಧೆ

 

 

error: Content is protected !!
Scroll to Top