ಮಂಗಳೂರು: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮ ಹತ್ಯೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 08. ಯುವತಿಯೋರ್ವಳು ಗೃಹ ಪ್ರವೇಶಗೈದ ಐದೇ ದಿನಕ್ಕೆ ಮನೆ ಕೋಣೆಯೊಳಗೆ 24 ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.

ಆತ್ಮಹತ್ಯೆಗೈದ ಯುವತಿಯನ್ನು ಫರಂಗಿಪೇಟೆ ಮೂಲದ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿ ಅಶ್ವಿನಿ ಬಂಗೇರ (25)ಎಂದು ಗುರುತಿಸಲಾಗಿದೆ. ಈಕೆ ನಿನ್ನೆ ರಾತ್ರಿ ತನ್ನ‌ ಸ್ನೇಹಿತೆ ಜೊತೆ ಚಾಟ್ ಮಾಡಿದ್ದಾಳೆ ಎನ್ನಲಾಗಿದ್ದು, ಸ್ನೇಹಿತೆ ಬೆಳಿಗ್ಗೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಅಶ್ವಿನಿ ಬರೆದ 24 ಪುಟಗಳ ಡೆತ್ ನೋಟ್ ಪೊಲೀಸರಿಗೆ ದೊರೆತಿದ್ದು, ಅದರಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿದ್ದು ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಉಲ್ಲೇಖಿಸಿದ್ದಳು. ಅಲ್ಲದೇ ಡೆತ್ ನೋಟ್ ನಲ್ಲಿ ಅಶ್ವಿನಿ ತನ್ನ ಪ್ರಿಯಕರನ ಹೆಸರು ಉಲ್ಲೇಖಿಸಿ ಐ ಲವ್ ಯೂ ಅಂತ ಬರೆದಿದ್ದು, ತಾನು ಬಳಸುತ್ತಿದ್ದ ಐ ಫೋನನ್ನು ಆತನಿಗೆ ನೀಡಬೇಕೆಂದು ಹೇಳಿದ್ದಾಳೆ. ಅಶ್ವಿನಿ ಸಾಮಾನ್ಯ ಕುಟುಂಬದವಳಾಗಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿದ್ದ ಈಕೆ ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದು ಕುಂಪಲದ ಚಿತ್ರಾಂಜಲಿ ನಗರದಲ್ಲಿ ಮನೆಯೊಂದನ್ನ ಖರೀದಿಸಿ, ಜೂ. 03 ರಂದು ಗೃಹಪ್ರವೇಶ ಮಾಡಿ ತಾಯಿ ದೇವಕಿ ಹಾಗೂ ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದಳೆನ್ನಲಾಗಿದೆ.

Also Read  ಉಪ್ಪಿನಂಗಡಿ: ವಿದ್ಯುತ್ ಶಾಕ್ ಹೊಡೆದು ಲೈನ್ ಮ್ಯಾನ್ ಮೃತ್ಯು

.

 

ಹಲವು ಸಂಕಷ್ಟಗೊಳಗಾದ ಅಶ್ವಿನಿ‌ ಖಿನ್ನತೆಗೊಳಗಾಗಿ ಆತ್ಮ ಹತ್ಯೆಗೈದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.ಮೃತ ದೇಹವನ್ನ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

 

 

 

 

error: Content is protected !!
Scroll to Top