ಸಂಗಾತಿಯನ್ನು ಹತ್ಯೆಗೈದು ಕುಕ್ಕರ್‌ನಲ್ಲಿ ಬೇಯಿಸಿದ ಪ್ರಿಯಕರ..!

(ನ್ಯೂಸ್ ಕಡಬ) newskadba.com ಮುಂಬೈ, ಜೂ. 08. ವ್ಯಕ್ತಿಯೊಬ್ಬನು ತನ್ನ ಸಂಗಾತಿಯನ್ನು ಹತ್ಯೆಗೈದು, ದೇಹದ ಭಾಗವನ್ನು ತುಂಡು ಮಾಡಿ ಅದನ್ನು ಕುಕ್ಕರ್ ನಲ್ಲಿ ಬೇಯಿಸಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.

ಕೊಲೆಯಾದವರನ್ನು ಸರಸ್ವತಿ ವೈದ್ಯ (36) ಎಂದು ಗುರುತಿಸಲಾಗಿದೆ. ಈಕೆ ಮನೋಜ್ ಸಹಾನಿ (36) ಎಂಬಾತನೊಂದಿಗೆ ಕಳೆದ ಮೂರು ವರ್ಷಗಳಿಂದ ವಾಸವಾಗಿದ್ದಳು. ಬುಧವಾರದಂದು ಸಂಜೆ ಮನೋಜ್‌ ಅವರ ನಿವಾಸದಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಮಾಹಿತಿ ಪಡೆದು ತನಿಖೆ ನಡೆಸಿದ ಪೊಲೀಸರಿಗೆ 3-4 ದಿನಗಳ ಹಿಂದೆ ಕೊಲೆಯಾಗಿರುವ ಮಹಿಳೆಯೊಬ್ಬರ ದೇಹದ ಭಾಗಗಳು ಕುಕ್ಕರ್‌ ನಲ್ಲಿ ಬೇಯುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಉಪ ಆಯುಕ್ತ ಜಯಂತ್ ಬಜ್ಬಲೆ, ಇವರಿಬ್ಬರ ನಡುವೆ ಜಗಳ ನಡೆದು, ಇದೇ ವಿಚಾರಕ್ಕೆ ಆಕೆಯ ದೇಹವನ್ನು ಮರ ಕಟ್‌ ಮಾಡುವ ಮಿಷನ್‌ ನಿಂದ ತುಂಡು ಮಾಡಿರಬಹುದು ಎಂದು ಶಂಕಿಸಿದ್ದಾರೆ. ನಾವು ಮನೆಗೆ ತಲುಪಿ ಬಾಗಿಲು ತೆರೆದಾಗ, ಇದು ಕೊಲೆ ಪ್ರಕರಣ ಎಂದು ನಮಗೆ ತಿಳಿದಿದೆ. ಶಂಕಿತ ಆರೋಪಿ ಸಾಕ್ಷ್ಯವನ್ನು ಮರೆಮಾಚಲು ಈ ರೀತಿ ದೇಹದ ಭಾಗವನ್ನು ಕುಕ್ಕರ್‌ ನಲ್ಲಿ ಬೇಯಿಸಿರಬಹುದು ಎಂದು ಹೇಳಿದ್ದಾರೆ.

Also Read   ಬ್ರೆಜಿಲ್ ನಲ್ಲಿ ವಿಮಾನ ಪತನ..!          62 ಮಂದಿ ಸಜೀವ ದಹನ ಭೀಕರ ದೃಶ್ಯ..!                                  

error: Content is protected !!
Scroll to Top