ಸಾಹಿತ್ಯ ಪುಸ್ತಕಗಳ ಕೊಡುಗೆ ➤ ಜೂ. 12ರೊಳಗೆ ನೋಂದಾಯಿಸಲು ಕರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 07. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಬಿ.ಆರ್. ನರಸಿಂಹ ರಾವ್ ಉಡುಪಿ ಅವರು ಮಂಗಳೂರು ತಾಲೂಕಿನ ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಾಚನಾಲಯಕ್ಕೆ ಸಾಹಿತ್ಯಿಕ  ಪುಸ್ತಕಗಳನ್ನು ಕೊಡುಗೆಯಾಗಿ  ನೀಡಲಿದ್ದಾರೆ.

ಈ ಕೊಡುಗೆಯನ್ನು ಪಡೆಯಲು ಶಾಲೆಗಳ ಮುಖ್ಯಸ್ಥರು ಇದೇ ಜೂ.12ರೊಳಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಅರುಣಾ ನಾಗರಾಜ್ ಮೊಬೈಲ್ ಸಂಖ್ಯೆ: 9141716602 ಅಥವಾ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಸಹ ಕಾರ್ಯದರ್ಶಿ ಯು.ಎಚ್.  ಖಾಲಿದ್ ಮಂಗಳೂರು ಮೊಬೈಲ್ ಸಂಖ್ಯೆ: 9845499527 ಅವರನ್ನು ತಮ್ಮ ಶಾಲೆಯ ವಿಳಾಸದೊಂದಿಗೆ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಳ್ಳುವ ಮೊದಲು 50 ಶಾಲೆಗಳಿಗೆ ಪುಸ್ತಕ ವಿತರಿಸಲಾಗುವುದು.  ವಿತರಣಾ ದಿನಾಂಕ ಮತ್ತು ಸ್ಥಳವನ್ನು  ಮುಂದೆ ತಿಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಅರಂತೋಡು: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

error: Content is protected !!
Scroll to Top