ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿನಿ ಕೊಲೆ ಪ್ರಕರಣ ➤ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 07. ಹಾಸ್ಟೆಲ್ ನಲ್ಲಿ ವಾಸವಿದ್ದ 18 ವರ್ಷದ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಸೆಕ್ಯುರಿಟಿ ಗಾರ್ಡ್ ಮೃತದೇಹವು ಹಾಸ್ಟೆಲ್ ಸಮೀಪದ ರೈಲ್ವೇ ಟ್ರಾಕ್ ಬಳಿ ಪತ್ತೆಯಾಗಿದೆ. ಆದುದರಿಂದ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ.

ಹಾಸ್ಟೆಲ್ ನಲ್ಲಿ ವಾಸವಿದ್ದ ವಿದ್ಯಾರ್ಥಿನಿಯು ಮಂಗಳವಾರದಂದು ಸಂಜೆ ನಾಪತ್ತೆಯಾಗಿರುವ ಕುರಿತು ದಾಖಲಾದ ದೂರಿನಂತೆ ಹುಡುಕಾಟ ನಡೆಸಿದಾಗ ಹಾಸ್ಟೆಲ್ ನ ನಾಲ್ಕನೇ ಮಹಡಿಯ ಕೊಠಡಿಯೊಂದರಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಪರಿಶೀಲನೆ ನಡೆಸಿದಾಗ ಹಾಸ್ಟೆಲ್ ಕೊಠಡಿಯಲ್ಲಿ ಆಕೆಯನ್ನು ಬಟ್ಟೆಯ ತುಂಡಿನಿಂದ ಕತ್ತು ಹಿಸುಕಿ ಹತ್ಯೆ ಮಾಡಿರುವುದು ತಿಳಿದುಬಂದಿತ್ತು. ಪೊಲೀಸರಿಗೆ ಲಭಿಸಿದ ಸಾಕ್ಷ್ಯಾಧಾರ ಮತ್ತು ಮೃತ ವಿದ್ಯಾರ್ಥಿನಿಯ ಸಂಬಂಧಿಕರು ನೀಡಿದ ದೂರಿನಂತೆ ಹಾಸ್ಟೆಲ್ ಸೆಕ್ಯುರಿಟಿ ಗಾರ್ಡ್ ವಿರುದ್ದ ಎಫ್ಐಆರ್ ದಾಖಲಿಸಲಾಗಿತ್ತು. ತನಿಖೆಯ ವೇಳೆ ಪೊಲೀಸರಿಗೆ ಹಾಸ್ಟೆಲ್ ಸೆಕ್ಯುರಿಟಿ ಗಾರ್ಡ್ ಓಂ ಪ್ರಕಾಶ್ ಕನೌಜಿಯಾ ಎಂಬಾತ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಆದರೆ ಆತನ ಪತ್ತೆಗಾಗಿ ಶೋಧ ನಡೆಸಿದಾಗ ಚಾರ್ನಿ ರೋಡ್ ಸ್ಟೇಷನ್ ಬಳಿಯ ಟ್ರಾಕ್ ಬಳಿ ಮೃತದೇಹ ಪತ್ತೆಯಾಗಿದೆ.

Also Read  ಮಂಗಳೂರು: ಕೊರೋನಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜುಗಾರಿ ಆಡುತ್ತಿದ್ದ 8 ಮಂದಿಯ ಬಂಧನ

error: Content is protected !!
Scroll to Top