ತೆರೆದ ಕೊಳವೆ ಬಾವಿಗೆ ಬಿದ್ದ ಮಗು ➤ ಮುಂದುವರಿದ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಭೋಪಾಲ್, ಜೂ. 07. ಆಟವಾಡುತ್ತಿದ್ದ ಮಗುವೊಂದು ತೆರೆದ ಕೊಳವೆ ಬಾವಿಗೆ ಬಿದ್ದ ಘಟನೆ ಮಧ್ಯ ಪ್ರದೇಶದ ಸೆಹೋರ್‌ ಜೆಲ್ಲೆಯ ಮುಗವಲಿ ಗ್ರಾಮದಲ್ಲಿ ನಡೆದಿದೆ.

ಸೃಷ್ಟಿ ಕುಶ್ವಾಹ ಎಂಬ ಮಗು ಜಮೀನಿನಲ್ಲಿ ಆಟವಾಡುತ್ತಿದ್ದ ವೇಳೆ 300 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, 20-25 ಅಡಿ ಆಳದಲ್ಲಿ ಮಗು ಸಿಲುಕಿದೆ. ಸ್ಥಳೀಯರು ಪೊಲೀಸರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಜೆಸಿಬಿ ಮೂಲಕ ಮತ್ತೊಂದು ಗುಂಡಿ ಅಗೆಯಲಾಗುತ್ತಿದ್ದು, ಆಮ್ಲಜನಕ ಸರಬರಾಜನ್ನು ನೀಡಿ ಮಗುವಿನ ಚಲನವಲಗಳ ಮೇಲೆ ನಿಗಾ ಇಡಲಾಗುತ್ತಿದೆ.

Also Read  ಮಂಗಳೂರು: ಇಂದು ಹಳೆ ಬಂದರ್ ನಿಂದ ಮಾಲ್ದೀವ್ಸ್ ಗೆ ಪ್ರಥಮ ಸರಕು ನೌಕೆ ಯಾನ

 

error: Content is protected !!
Scroll to Top