ಇಚಿಲಂಪಾಡಿ – ಪೆರಿಯಶಾಂತಿ ಹೆದ್ದಾರಿ ಕಾಮಗಾರಿ ಹಿನ್ನೆಲೆ ➤ ಇಂದು (ಜೂ.07) ಧರ್ಮಸ್ಥಳ – ಸುಬ್ರಹ್ಮಣ್ಯ ಸಂಚಾರದಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.07. ಲೋಕೋಪಯೋಗಿ ಇಲಾಖೆಯ ಸುಬ್ರಹ್ಮಣ್ಯ ಉಡುಪಿ ರಾಜ್ಯ ಹೆದ್ದಾರಿ 37ರ ಇಚ್ಲಂಪಾಡಿ ಹಾಗೂ ಪೆರಿಯಶಾಂತಿ ನಡುವೆ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ – ಸುಬ್ರಹ್ಮಣ್ಯ ರಸ್ತೆ ಸಂಚಾರದಲ್ಲಿ ತಡೆ ಇರಲಿದೆ.

ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಸಂಚರಿಸುವ ವಾಹನಗಳು ಗುಂಡ್ಯ ಮಾರ್ಗವಾಗಿ ಸಂಚರಿಸುವುದು ಹಾಗೂ ಸ್ಥಳೀಯ ವಾಹನ ಸವಾರರು ಲಾವತ್ತಡ್ಕ ರಸ್ತೆಯ ಮೂಲಕ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪ ವಿಭಾಗದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಜಿ.ಟಿ.ಟಿ.ಸಿ. ಡಿಪ್ಲೋಮಾ ಕೋರ್ಸ್ ಗಳ ಪ್ರವೇಶ - ಅರ್ಜಿ ಆಹ್ವಾನ

error: Content is protected !!
Scroll to Top