‘ಬಾಡಿಗೆದಾರರಿಗೂ ಉಚಿತ ವಿದ್ಯುತ್‌’ ➤ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ)newskadaba@gmail.comಬೆಂಗಳೂರು ,( ಜೂ 06) ರಾಜ್ಯದಲ್ಲಿ ಬಾಡಿಗೆದಾರರು ಸೇರಿದಂತೆ ಎಲ್ಲರಿಗೂ 200 ಯೂನಿಟ್ವರೆಗೆ ಉಚಿತ  ವಿದ್ಯುತ್ ನೀಡುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಕೆಲವರು50, ಇನ್ನು ಕೆಲವರು 70, 150, 200ಯೂನಿಟ್‌ ವಿದ್ಯುತ್‌ ಬಳಕೆ ಮಾಡುತ್ತಿರಬಹುದು. ಇದರ ವ್ಯಾಪ್ತಿಯಲ್ಲಿ ಬರುವ ಯಾವುದೇ ಗ್ರಾಹಕರು ವಿದ್ಯುತ್‌ ದರವನ್ನು ಪಾವತಿಸುವ ಅಗತ್ಯವಿಲ್ಲ. ಆದರೆ, ಈ ಉಚಿತ ವಿದ್ಯುತ್‌ ಯೋಜನೆ ವಾಣಿಜ್ಯ ಬಳಕೆದಾರರಿಗೆ ಅನ್ವಯವಾಗುವುದಿಲ್ಲ. ಹೀಗಾಗಿ, ಬಾಡಿಗೆದಾರರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಇಷ್ಟೆಲ್ಲಾ ಆದರೂ ಒಂದೇ ಮಾಲೀಕರ ಹೆಸರಿನಲ್ಲಿ ನಾಲ್ಕಾರು ವಿದ್ಯುತ್ ಮೀಟರುಗಳಿದ್ದರೆ ಎಲ್ಲ ನಾಲಕ್ಕೂ ಮೀಟರುಗಳಿಗೆ ಉಚಿತ ವಿದ್ಯುತ್​ ಅನ್ವಯ ಆಗುತ್ತದೋ, ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿಲ್ಲ.

Also Read  ? ಉಪ್ಪಿನಂಗಡಿ: ಅರಣ್ಯ ವೀಕ್ಷಕ ಆತ್ಮಹತ್ಯೆ

 

 

 

 

 

error: Content is protected !!
Scroll to Top