ಕಾರಿನ ಮೇಲೆ ಬೃಹತ್ ಜಾಹೀರಾತು ಫಲಕ ➤ತಾಯಿ – ಮಗಳು ಮೃತ್ಯು

(ನ್ಯೂಸ್ ಕಡಬ)newskadaba@gmail.com ಲಕ್ನೋ, ,( ಜೂ 06) ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಜಾಹೀರಾತು ಫಲಕ ಬಿದ್ದು ತಾಯಿ ಮತ್ತು ಮಗಳು ಸಾವಿಗೀಡಾದ ದಾರುಣ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.ಮೃತರನ್ನು ಪ್ರೀತಿ ಜಗ್ಗಿ(38) ಮತ್ತು ಏಂಜಲ್(15)  ಎಂದು ಗುರುತಿಸಲಾಗಿದೆ. ಕಾರಿನ ಡ್ರೈವರ್​ ಸರ್ತಾಜ್ (28) ಭೀಕರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಾಯಿ ಹಾಗೂ ಮಗಳು ಮಾಲ್‌ಗೆ ಹೋಗುತ್ತಿದ್ದಾಗ ಏಕಾನಾ ಸ್ಟೇಡಿಯಂ ಹತ್ತಿರದ ಗೇಟ್ ನಂಬರ್ ಎರಡರ ಮುಂಭಾಗದಲ್ಲಿದ್ದ ಜಾಹೀರಾತು ಫಲಕ ಏಕಾಏಕಿ ಮಹೇಂದ್ರಾ ಎಸ್​​ಯುವಿ ಮೇಲೆ ಬಿದ್ದು ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

Also Read  ತಲೆ, ಕೈಕಾಲು ಕತ್ತರಿಸಿ ಯುವತಿಯ ಬರ್ಬರ ಹತ್ಯೆ

 

error: Content is protected !!
Scroll to Top