ಮಂಗಳೂರು: ಅಕ್ರಮ ಜಾನುವಾರು ಸಾಗಾಟ ➤ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 06. ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ನಾಲ್ವರನ್ನು ಕಾಲಾಪು ಎಂಬಲ್ಲಿ ಬಂಧಿಸಿರುವ ಕುರಿತು ವರದಿಯಾಗಿದೆ.

ಬಂಧಿತರನ್ನು ಉಳ್ಳಾಲ ಮೂಲದ ಅಹಮ್ಮದ್ ಇರ್ಷಾದ್, ಜಾಫರ್ ಸಾದಿಕ್, ಫಯಾಝ್ ಹಾಗೂ ಮಂಜೇಶ್ವರದ ಖಾಲಿದ್ ಬಿಎಂ ಎಂದು ಗುರುತಿಸಲಾಗಿದೆ. ಆರೋಪಿಗಳು ಅಮಲಮೊಗರು ಎಂಬಲ್ಲಿ ವೃದ್ಧೆಯೊಬ್ಬರಿಂದ ನಾಲ್ಕು ಹಸುಗಳನ್ನು ಖರೀದಿಸಿ ಕೇರಳ ನೋಂದಾಯಿತ ಸಂಖ್ಯೆಯ ಮಿನಿ ಗೂಡ್ಸ್ ವಾಹನದಲ್ಲಿ ಉಳ್ಳಾಲದ ಅಲೇಕಲಕ್ಕೆ ಸಾಗಿಸುತ್ತಿದ್ದ ವೇಳೆ, ಗೂಡ್ಸ್ ವಾಹನವು ಕೆಟ್ಟುನಿಂತು ಮುಂದೆ ಸಾಗಲು ಸಾಧ್ಯವಾಗದಿದ್ದಾಗ ವಾಹನದಲ್ಲಿದ್ದ ಮೂವರು ತಳ್ಳಲು ಪ್ರಾರಂಭಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳು ಕೂಡಾ ವಾಹನವನ್ನು ತಳ್ಳಿ ಸಹಾಯ ಮಾಡಲು ಹೋದಾಗ ನಾಲ್ಕು ಹಸುಗಳನ್ನು ಕಟ್ಟಿ ಹಾಕಿ ಟಾರ್ಪಲ್ ಹಾಕಿರುವುದು ಗಮನಕ್ಕೆ ಬಂದಿತ್ತು. ಇದನ್ನು ವಿಚಾರಣೆ ನಡೆಸಿದಾಗ ಆರೋಪಿಗಳು ಸರಕು ಸಾಗಣೆ ವಾಹನ, ಹಸುಗಳು ಹಾಗೂ ದ್ವಿಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಿದ್ದರು.

Also Read  ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ ➤ ಅರ್ಚಕರಲ್ಲಿ ಹಾಗೂ ಭಕ್ತರಲ್ಲಿ ಅಸಮಾಧಾನ

error: Content is protected !!
Scroll to Top