ಕ್ಷುಲ್ಲಕ ವಿಚಾರಕ್ಕೆ ಬಾರ್ ಕ್ಯಾಶಿಯರ್ ಗೆ ಡ್ರ್ಯಾಗರ್ ನಿಂದ ಚುಚ್ಚಿ ಹಲ್ಲೆ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜೂ. 05. ಕ್ಷುಲಕ ವಿಚಾರಕ್ಕಾಗಿ ಬಾರ್‌ ಕ್ಯಾಶಿಯರ್‌ಗೆ ಡ್ರ್ಯಾಗರ್‌ನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ನಗರದ ಬಾರ್‌ ವೊಂದರಲ್ಲಿ ಸಂಭವಿಸಿದೆ.

ಕೊಲೆಯಾದ ವ್ಯಕ್ತಿಯನ್ನು ಬಾರ್‌ ಕ್ಯಾಶಿಯರ್‌ ಸಚಿನ್‌ (27) ಎಂದು ಗುರುತಿಸಲಾಗಿದೆ. ಈತ ಬಾರ್‌ ಬಂದ್‌ ಮಾಡುವ ಸಮಯವಾದರೂ, ಆಯನೂರಿನ ಮೂವರು ಮದ್ಯ ಸೇವಿಸುತ್ತಿದ್ದು, ಬಾರ್‌ ಸಿಬ್ಬಂದಿ ಸಮಯವಾಗಿದೆ ಎಂದು ಹೇಳಿದರೂ, ತಾವು ಇನ್ನೂ ಮದ್ಯ ಸೇವಿಸಬೇಕಿದೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಆಗ ಬಾರ್‌ನ ಅಸಿಸ್ಟೆಂಟ್‌ ಕ್ಯಾಶಿಯರ್‌ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬರುತ್ತಿದ್ದಂತೆಯೇ ಆಕ್ರೋಶಗೊಂಡ ಯುವಕರು ಸಚಿನ್‌ಗೆ ಹಲ್ಲೆ ನಡೆಸಿದ್ದಾರೆ. ಈ ಪೈಕಿ ಓರ್ವ ಯುವಕ ಬಿಯರ್‌ ಬಾಟಲಿಯನ್ನು ತಲೆಗೆ ಹೊಡೆದುಕೊಂಡು ಬಾರ್‌ ಸಿಬ್ಬಂದಿಗೆ ಚುಚ್ಚಲು ಬಂದಿದ್ದು, ಈ ವೇಳೆ ಅಸಿಸ್ಟೆಂಟ್‌ ಕ್ಯಾಶಿಯರ್‌ ಅರುಣ್‌ ಕುಮಾರ್‌ ಕೈಗೆ ಸಣ್ಣ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮತ್ತೋರ್ವ ತನ್ನ ಬಳಿಯಿದ್ದ ಡ್ರ್ಯಾಗರ್‌ ತೆಗೆದು ಕ್ಯಾಶಿಯರ್‌ ಸಚಿನ್‌ ಎದೆಯ ಬಲಭಾಗಕ್ಕೆ ಚುಚ್ಚಿದ್ದು, ಗಂಭೀರ ಗಾಯಗೊಂಡಿದ್ದ ಸಚಿನ್‌ನನ್ನು ಸಿಬಂದಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಸಚಿನ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕೊಣಾಜೆ: ಅಂಗನವಾಡಿ ಸಹಾಯಕಿಗೆ ಲೈಂಗಿಕ ಕಿರುಕುಳ ➤ ಆರೋಪಿ ಅರೆಸ್ಟ್

error: Content is protected !!
Scroll to Top