ಉಳ್ಳಾಲ: ಮೆಹಂದಿ ಶಾಸ್ತ್ರದ ದಿನವೇ ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. ಮೆಹಂದಿ ಶಾಸ್ತ್ರದ ದಿನ ನಾಪತ್ತೆಯಾಗಿದ್ದ ಮದುಮಗನೋರ್ವ ಬಳ್ಳಾರಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ನಾಪತ್ತೆಯಾದ ಯುವಕನನ್ನು ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿ ಅವರ ಪುತ್ರ ಕಿಶನ್‌ ಶೆಟ್ಟಿ ಎಂದು ಗುರುತಿಸಲಾಗಿದೆ. ಮೇ. 31ರಂದು ರಾತ್ರಿ ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲೆಂದು ಹೋಗಿದ್ದ ಕಿಶನ್‌ ನಾಪತ್ತೆಯಾಗಿದ್ದರು. ಆ ಬಳಿಕ ಭಾನುವಾರದಂದು ಮಧ್ಯಾಹ್ನ ಕಿಶನ್‌ ಶೆಟ್ಟಿ ತನ್ನ ತಂಗಿ ಮೊಬೈಲ್ಗೆ ಸಂದೇಶ ಕಳುಹಿಸಿ ನಾನು ಬಳ್ಳಾರಿಯಲ್ಲಿ ಇದ್ದು, ಸ್ಕೂಟರ್ ಮೆಲ್ಕಾರ್ ಆರ್‌ಟಿಒ ಕಚೇರಿ ಮುಂದೆ ಇಟ್ಟಿದ್ದೇನೆ. ಆದರೆ ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾನೆ. ಸಂದೇಶದ ನೋಡಿದ ಕೂಡಲೇ ತಂಗಿ ಕರೆ ಮಾಡಲು ಯತ್ನಿಸಿದ್ದು, ಆದರೆ ಕಿಶನ್‌ ಶೆಟ್ಟಿ ಮೊಬೈಲ್‌ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಐತಪ್ಪ ಶೆಟ್ಟಿ ಅವರು ಕೊಣಾಜೆ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ.

Also Read  ಕರ್ನಾಟಕ ಹಾಗೂ ದೇಶದಲ್ಲಿ ಇರುವ ಕೋವಿಡ್ ಕೇಸ್.!?

error: Content is protected !!
Scroll to Top