ಕಡಬ ತಾಲೂಕಾಗಿ ಅಂತಿಮ ಅಧಿಸೂಚನೆ ► ಕಡಬ ತಹಶೀಲ್ದಾರ್ ಕಛೇರಿಗೆ ಬಂತು ಆದೇಶ ಪತ್ರ

(ನ್ಯೂಸ್ ಕಡಬ) newskadaba.com ಕಡಬ, ಜ.19. ಜನರ ಬಹುಕಾಲದ ಬೇಡಿಕೆಯಾದ ಕಡಬ ತಾಲೂಕು ಅನುಷ್ಠಾನಕ್ಕೆ  ಕೊನೆಗೂ ಅಧಿಕೃತ ಆದೇಶ ಹೊರಬಿದ್ದಿದ್ದು, ಕಡಬ ತಹಶೀಲ್ದಾರರವರಿಗೆ ಕರ್ನಾಟಕ ರಾಜ್ಯ ಪತ್ರದಲ್ಲಿ ಜನವರಿ 12 ರಿಂದ ಅನ್ವಯವಾಗುವಂತೆ ಹೊರಡಿಸಲಾದ ಆದೇಶ ಪತ್ರದಲ್ಲಿ ಕಡಬವನ್ನು ಅಧಿಕೃತ ತಾಲೂಕೆಂದು  ಘೋಷಿಸಲಾಗಿದೆ.

ಕಡಬ ತಾಲೂಕಿಗೆ 42 ಗ್ರಾಮಗಳ್ನು ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಡಬವು ಪೂರ್ಣಪ್ರಮಾಣದ ತಾಲೂಕಾಗಿ ಕಾರ್ಯಾರಂಭ ಮಾಡಲಿದೆ. ಈ ಹಿಂದೆ ಪ್ರಸ್ತಾವನೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಗ್ರಾಮಗಳನ್ನು ಕೈಬಿಟ್ಟು  ಪುತ್ತೂರು ತಾಲೂಕಿನ 35 ಗ್ರಾಮಗಳನ್ನು ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಸೇರಿಸಲಾಗಿದೆ. ಒಟ್ಟು 42 ಗ್ರಾಮಗಳ ವ್ಯಾಪ್ತಿಯ ಹೊಸ ಕಡಬ ತಾಲೂಕು ರಚನೆಯಾಗಿದೆ. ಹೊಸ ತಾಲೂಕಿನ ಒಟ್ಟು ಜನಸಂಖ್ಯೆ 2011 ರ ಜನಗಣತಿಯಂತೆ 1,20,086 ಆಗಿದ್ದು ಒಟ್ಟು 149159.8 ಎಕ್ರೆ ಬೌಗೋಳಿಕ ವಿಸ್ತರ್ಣವನ್ನು ಹೊಂದಿದೆ.

ಆದೇಶದಲ್ಲಿ ಉಲ್ಲೇಖಿಸಿದಂತೆ ಪ್ರಸ್ತುತ ಪುತ್ತೂರು ತಾಲೂಕಿನಲ್ಲಿರುವ ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಐತ್ತೂರು, ಬಿಳಿನೆಲೆ, ಕೊಂಬಾರು, ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರುಪ್ಪಾಡಿ, ಬಲ್ಯ, ಪೆರಾಬೆ, ಕುಂತೂರು, ಆಲಂಕಾರು, ರಾಮಕುಂಜ, ಕೊಯಿಲ, ದೋಳ್ಪಾಡಿ, ಹಳೆನೇರಂಕಿ, ಕಾಣಿಯೂರು, ಚಾರ್ವಾಕ, ಬೆಳಂದೂರು, ಕಾಯಿಮಣ, ಕುದ್ಮಾರು, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಕೊಣಾಜೆ, ಶಿರಿಬಾಗಿಲು, ಗೋಳಿತೊಟ್ಟು, ಕೊಣಾಲು, ಅಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಹಾಗೂ ಸುಳ್ಯ ತಾಲೂಕಿನ ಯೇನೆಕಲ್ಲು, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು ಮತ್ತು ಎಡಮಂಗಲ ಗ್ರಾಮಗಳು ಹೊಸ ತಾಲೂಕಿನ ವ್ಯಾಪ್ತಿಯಲ್ಲಿದೆ. ತಾಲೂಕಿಗೆ ಸಂಬಂಧಪಟ್ಟಂತೆ ಹಲವಾರು ಇಲಾಖೆಗಳು ಅಗತ್ಯವಾಗಿ ನಿರ್ಮಾಣವಾಗಬೇಕಾಗಿದ್ದು, ಕಡಬ ವ್ಯಾಪ್ತಿಯಲ್ಲಿ ಸುಮಾರು 27 ಎಕ್ರೆಯಷ್ಟು ಜಾಗವನ್ನು ವಿವಿಧ ಇಲಾಖೆಗಳಿಗಾಗಿ ಈಗಾಗಲೇ ಗುರುತಿಸಲಾಗಿದೆ. ಆದರೆ ನೂತನ ತಾಲೂಕು ಆದೇಶದಲ್ಲಿ ತಾಲೂಕಿಗೆ ಸಂಬಂಧಪಟ್ಟ ಅಗತ್ಯ ಮೂಲಭೂತ ಸೌಲಭ್ಯಗಳ ಪೂರೈಕೆಗಾಗಿ ಯಾವುದೇ ಅನುದಾನ ಮೀಸಲಿಟ್ಟ ಬಗ್ಗೆ  ಉಲ್ಲೇಖವಿಲ್ಲ.

Also Read  ಕಡಬ: ಬೀಡಿ ಅದ್ರಾಮ ಎಂದು ಚಿರಪರಿಚಿತರಾಗಿದ್ದ ಹಾಜಿ ಅಬ್ದುಲ್ ರಹಿಮಾನ್ ‌ನಿಧನ

ಬೇಕಾಗಿರುವುದು
* ಸುಸಜ್ಜಿತ ಮಿನಿ ವಿಧಾನಸೌದ
* ನ್ಯಾಯಲಯ
* ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆ
*ಸಬ್ ರಿಜಿಸ್ಟ್ರಾರ್ ಕಛೇರಿ,
*ಖಜಾನೆ
*ಅಗ್ನಿಶಾಮಕ ಠಾಣೆ
*ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ,
*ತೋಟಗಾರಿಕೆ ಇಲಾಖೆ
*ಕೃಷಿ ಇಲಾಖೆ
*ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಭಾಗ ಕಛೇರಿ
*ಲೋಕೋಪಯೋಗಿ ಇಲಾಖಾ ಕಛೇರಿ
*ಆಹಾರ ನಿರೀಕ್ಷಕರ ಕಚೇರಿ
*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಕಛೇರಿ
*ಸರಕಾರಿ ಪದವಿ ಕಾಲೇಜು
*ಪತ್ರೇಕ ಎಪಿಎಂಸಿ
* ಪ್ರತ್ಯೇಕ ತಾಲೂಕು ಪಂಚಾಯಿತಿ ವ್ಯವಸ್ಥೆ ಮತ್ತು ಕಛೇರಿ
* ಸುಸಜ್ಜಿತ ಬಸ್ಸು ನಿಲ್ದಾಣ

Also Read  ಕುಂದಾಪುರ: ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು

“ಈಗಾಗಲೇ ನೂತನ ತಾಲೂಕಾಗಿ ಘೋಷಿಸಲಾಗಿರುವ ಕಡಬವನ್ನು ಪೂರ್ಣ ಪ್ರಮಾಣದ ತಾಲೂಕಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ತಾಲೂಕು ಮಟ್ಟದ ವಿವಿಧ ಇಲಾಖೆಗಳು ಇನ್ನಷ್ಟೆ ತೆರೆಯಬೇಕಾಗಿದ್ದು, ಇದಕ್ಕಾಗಿ ಕಡಬ ಸುತ್ತಮುತ್ತ ಸುಮಾರು 27 ಎಕರೆ ಜಾಗವನ್ನು ಗುರುತಿಸಲಾಗಿದೆ. ಮತ್ತಷ್ಟು ಜಾಗದ ಅಗತ್ಯವಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು”.

ಜಾನ್ ಪ್ರಕಾಶ್ ರೋಡ್ರಿಗಸ್, ಕಡಬ ತಹಶೀಲ್ದಾರ್

error: Content is protected !!
Scroll to Top