ಒಂದೇ ವರ್ಷದಲ್ಲಿ 2ನೇ ಬಾರಿ ಕುಸಿದುಬಿದ್ದ ಬೈಯ್ಯಪ್ಪನಹಳ್ಳಿ ರೈಲ್ವೇ ಟರ್ಮಿನಲ್ ಮೇಲ್ಛಾವಣಿ!

(ನ್ಯೂಸ್ ಕಡಬ)newskadaba @gmail.com , ಬೆಂಗಳೂರು: ಜೂನ್ 1, ಲೋಕಾರ್ಪಣೆಯಾದ ಒಂದೇ ವರ್ಷದೊಳಗೆ ಎರಡನೇ ಬಾರಿ ಬೈಯ್ಯಪ್ಪನಹಳ್ಳಿ ರೈಲ್ವೇ ಟರ್ಮಿನಲ್ ಮೇಲ್ಛಾವಣಿ ಕುಸಿದಿದೆ.

ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಉದ್ಘಾಟನೆಯಾದ ಬೈಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನ ಛಾವಣಿ ಒಂದೇ ವರ್ಷಕ್ಕೆ ಕುಸಿದು ಬಿದ್ದಿದ್ದು, ಭಾರಿ ಅಪಘಾತ ತಪ್ಪಿದೆ.ಟರ್ಮಿನಲ್​ನಲ್ಲಿ ಮಂಗಳವಾರ ಮಧ್ಯಾಹ್ನ ಗಾಳಿ, ಮಳೆಯಿಂದಾಗಿ ಈ ಘಟನೆ ನಡೆದಿದೆ. ಛಾವಣಿ ಕೆಳಗಿದ್ದ ಪ್ರಯಾಣಿಕರು ಪಾರಾಗಿದ್ದಾರೆ ಎಂದು ವರದಿಯಾಗಿದೆ.

 

 

error: Content is protected !!
Scroll to Top