ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವು!

(ನ್ಯೂಸ್ ಕಡಬ)newskadaba @gmail.com ಕಾರ್ಕಳ , ಜೂನ್, 1 ನಂದಳಿಕೆ ಮೂಡುಮನೆಯಲ್ಲಿ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವು.

ಈ ಬಗ್ಗೆ ಎನ್ ಸುಧಾಕರ ರಾವ್  (66) ಕಾರ್ಕಳ ಠಾಣೆಗೆ ದೂರು ನೀಡಿದ್ದಾರೆ.ಮೇ 26 ರ ಮಧ್ಯಾಹ್ನ 3ರಿಂದ ಮೇ 30 ರ ಸಂಜೆ 6 ಗಂಟೆಯ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿರುವುದಾಗಿದೆ. ಸುಧಾಕರ ರಾವ್ ವಾಸವಿರುವ ಮನೆಯ ಪಕ್ಕದಲ್ಲಿರುವ ಇವರ ಮೂಲಮನೆ ಮೂಡುಮನೆಯ ಕಪಾಟಿನಲ್ಲಿ ಇಟ್ಟಿದ್ದ ಸುಮಾರು 40 ಗ್ರಾಂ ತೂಕದ ಕರಿಮಣಿ ಸರ-2. 26 ಗ್ರಾಂನ ನಕ್ಲೇಸ್ -1. 40 ಗ್ರಾಂ ನ ಮುತ್ತಿನ ಸರ -1. 30 ಗ್ರಾಂನ ಕಿವಿ ಓಲೆ-3, 15 ಗ್ರಾಂನ ಉಂಗುರ -2, 24 ಗ್ರಾಂ ನ ಲಕ್ಷ್ಮಿ ಪದಕ ಇರುವ ಚೈನು -1, 10 ಗ್ರಾಂ ನ ಮಕ್ಕಳ ಚೈನು -1, 10 ಗ್ರಾಂ ನ ಬಳೆ-1, ಆಧಾರ್ ಕಾರ್ಡ್.ಪಾನ್ ಕಾರ್ಡ್ ಹಾಗೂ ಸುಮಾರು 3000 ನಗದು, ಅಂದಾಜು 24 ಪವನ್ ತೂಕದ ಸುಮಾರು 5 ಲಕ್ಷಮೌಲ್ಯದ ಒಡವೆಗಳನ್ನು ಯಾರೋ ಕಳ್ಳರು ಕಳುವು ಗೈದಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

Also Read  'ವಿಟ್ಲದಲ್ಲಿ ನಡೆದ ಅತ್ಯಾಚಾರವನ್ನು ಮಂಗಳೂರು ಫೈಲ್ಸ್ ಎಂದು ಕರೆಯಬಹುದೇ' ? - ಸಚಿವ ದಿನೇಶ್ ಗುಂಡೂರಾವ್ ತಿರುಗೇಟು

 

error: Content is protected !!
Scroll to Top