(ನ್ಯೂಸ್ ಕಡಬ)newskawaba @gmail.com ರಷ್ಯಾ, ಜೂನ್, 1. ಮಾಸ್ಕೋ (ರಷ್ಯಾ): ರಷ್ಯಾ ಯುದ್ಧ ಆರಂಭಿಸಿ 15 ತಿಂಗಳ ಬಳಿಕ ಉಕ್ರೇನ್ ಪ್ರತ್ಯುತ್ತರ ನೀಡುತ್ತಿದೆ.
ರಷ್ಯಾ ಆಕ್ರಮಿಸಿದ ಪ್ರದೇಶಗಳನ್ನು ಮರಳಿ ವಶಕ್ಕೆ ಪಡೆಯಲು ದಾಳಿಗೆ ಮುಂದಾಗಿದೆ. ಅಂತೆಯೇ ರಷ್ಯಾದ ಗಡಿಯಲ್ಲಿ ಬುಧವಾರ ಭಾರಿ ಗುಂಡಿನ ದಾಳಿ ನಡೆದಿದೆ. ಡ್ರೋನ್ ಅಪ್ಪಳಿಸಿದ ಪರಿಣಾಮ ತೈಲ ಸಂಸ್ಕರಣಾ ಘಟಕ ಹೊತ್ತಿ ಉರಿದಿದೆ. ರಷ್ಯಾದ ಬೆಲ್ಗೊರೊಡ್ ಪ್ರಾಂತ್ಯದ ಗಡಿ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಅಪಾರ್ಟ್‌ಮೆಂಟ್ ಕಟ್ಟಡಗಳು, ನಾಲ್ಕು ಮನೆಗಳು, ಒಂದು ಶಾಲೆ ಮತ್ತು ಎರಡು ಆಡಳಿತಾತ್ಮಕ ಕಟ್ಟಡಗಳಿಗೆ ಹಾನಿಯಾಗಿದೆ. ಇದಕ್ಕೆಲ್ಲ ಉಕ್ರೇನ್ ಸೇನೆಯೇ ಕಾರಣ ಎಂದು ಬೆಲ್ಗೊರೊಡ್ ಪ್ರಾಂತ್ಯದ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಗಂಭೀರ ಆರೋಪ ಮಾಡಲಾಗಿದೆ ಎಂದು ವರದಿಯಾಗಿದೆ.