(ನ್ಯೂಸ್ ಕಡಬ)newskadaba.com ಸೂರತ್,ಮೇ.31 ಪತಿ -ಪತ್ನಿ ನಡುವಿನ ಜಗಳವನ್ನು ತಡೆಯಲು ಮುಂದಾದ ಮಗಳನ್ನು ಚಾಕುವಿನಿಂದ ತಂದೆ ಇರಿದು ಕೊಂದ ಘಟನೆ ಸೂಸತ್ನಲ್ಲಿ ವರದಿಯಾಗಿದೆ.
ಪತಿ -ಪತ್ನಿ ನಡುವಿನ ಜಗಳವನ್ನು ತಡೆಯಲು ಮಗಳು ಸೇರಿದಂತೆ ಮನೆಯ ಇತರ ಸದಸ್ಯರು ಮುಂದಾಗಿದ್ದಾರೆ. ಈ ವೇಳೆ ಮಗಳನ್ನು ಹಿಡಿದು 25 ಬಾರಿ ಚಾಕುವಿನಿಂದ ಚುಚ್ಚಿ ಹತ್ಯೆಗೈದಿದ್ದಾನೆ. ಪತ್ನಿ ರೇಖಾ ದೂರಿನ ಮೆರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.