ಭಾರತೀಯ ನೌಕಾದಳಕ್ಕೆರಾಜ್ಯದಿಂದ ಆಯ್ಕೆಯಾದ ಯುವತಿ

(ನ್ಯೂಸ್ ಕಡಬ)newskadaba ದಾವಣಗೆರೆ, ಮೇ, 31. ದಾವಣಗೆರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮನೆಗೆ ಆಧಾರಸ್ತಂಭವಾಗಿದ್ದ ತಂದೆ ಮೃತಪಟ್ಟಿದ್ದರು, ಹೀಗಿದ್ದರೂ ಕಠಿಣ ಪರಿಶ್ರಮದಿಂದ ಯುವತಿಯೊಬ್ಬರು ಇದೀಗ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿದ್ದಾರೆ.ತಾಯಿ ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿ ದುಡಿದು ಶಿಕ್ಷಣ ನೀಡಿದ್ದೇ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿಯ ಈ ಸಾಧನೆಗೆ ಸಹಕಾರಿಯಾಗಿದೆ.

ಹರಿಹರ ನಗರದ ನಿವಾಸಿ ಲತಾ ಎಂಬವರ ಪುತ್ರಿ ಭೂಮಿಕ ಇದೀಗ ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ತಂದೆಯನ್ನು ಕಳೆದುಕೊಂಡ ಭೂಮಿಕಾರಿಗೆ ಆ ಕೊರಗು ನೀಗಿಸಿದವರು ತಾಯಿ ಲತಾ. ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡುತ್ತಾ, ಎರಡು ಹಸುಗಳನ್ನು ಸಾಕುತ್ತಿದ್ದು. ಇದರಿಂದ ಕೈ ಸೇರಿದ ಹಣದಿಂದ ತನ್ನ ಮೂರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಹೊರತುಪಡಿಸಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಲತಾ ಸಾಕಷ್ಟು ಸಾಲ ಕೂಡಾ ಮಾಡಿದ್ದರು.

Also Read  ಪರಿಶಿಷ್ಟ ಪಂಗಡದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

 

error: Content is protected !!
Scroll to Top