ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿಯಾಗದ 94ಸಿ ಕಡತ..! ಪ್ರಶ್ನಿಸಿದ ಪತ್ರಕರ್ತನಿಗೆ ದಬಾಸಿದ ತಾಲೂಕು ಕಛೇರಿ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಕಡಬ, ಮೇ.30. ಕಡಬ ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ ಉಳಿದ 94 ಸಿ ಕಡತದ ಬಗ್ಗೆ ವಿಚಾರಿಸಲು ತೆರಳಿದ ಪತ್ರಕರ್ತರಿಗೆ ಕಡತ ವಿಲೇವಾರಿ ಸಿಬಂದಿ ಅನುಚಿತವಾಗಿ ವರ್ತಿಸಿದ ಅರೋಪ ವ್ಯಕ್ತವಾಗಿದೆ.


ಕಳೆದ 5 ತಿಂಗಳ ಹಿಂದೆ ಸುಬ್ರಹ್ಮಣ್ಯದ ಮಹಿಳೆಯೋರ್ವರು 94 ಸಿ ಅರ್ಜಿ ಸಲ್ಲಿಸಿದ್ದರು. ಬಳಿಕ ಕುಂಟುತ್ತಾ ಸಾಗುತ್ತಾ ವಿಲೇವಾರಿಯಾಗಲಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಗ್ರಾಮದ ಕಡತ ವಿಲೇವಾರಿ ಮಾಡುವ ಸಿಬ್ಬಂದಿ ಬಳಿ ತೆರಳಿ ಕಡಬದ ಪತ್ರಕರ್ತರೋರ್ವರು ವಿಚಾರಿಸುವ ವೇಳೆ ಪತ್ರಕರ್ತ ಎಂದು ಪರಿಚಯಿಸಿಕೊಂಡಿದ್ದಾರೆ. ಪತ್ರಕರ್ತರು ಎಂದು ಪರಿಚಯಿಸಿಕೊಂಡು ಇಲ್ಲಿಗೆ ಬರಬೇಡಿ ಎಂದು ದಬಾಯಿಸಿದ್ದಾರೆ. ಅಲ್ಲದೆ ಕಡತ ಬೇಕಾದರೆ ಉಪತಹಸೀಲ್ದಾರ , ಟಪಾಲು ನಿರ್ವಹಣೆ ಮಾಡುವ ಸಿಬ್ಬಂದಿ ಜೊತೆ ಅಲ್ಲಿ ವಿಚಾರಿಸಿ, ನಾನು ಆ ದಾಖಲೆಯನ್ನು ವಿಲೇವಾರಿ ಮಾಡುವುದಿಲ್ಲ ಎಂದು ದಬಾಯಿಸಿದ್ದಾರೆ. ಈ ಬಗ್ಗೆ ತಹಸೀಲ್ದಾರ ಮತ್ತು ಉಪತಹಸೀಲ್ದಾರ ಅವರಿಗೆ ಮೌಖಿಕ ದೂರು ನೀಡಿದ್ದು, ಕಡತ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದರಲ್ಲದೆ ಈ ಬಗ್ಗೆ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸಭ್ಯತೆಯಿಂದ ವರ್ತಿಸಲು ತಿಳಿ ಹೇಳುವುದಾಗಿ ತಹಸೀಲ್ದಾರ್ ಪತ್ರಕರ್ತರಿಗೆ ತಿಳಿಸಿದ್ದಾರೆ.

Also Read  ಶಾಲೆಗಳಲ್ಲಿ ರಾಜಕೀಯ ಮಾಡುವ ಶಿಕ್ಷಕರ ವಿರುದ್ದ ಸೂಕ್ತ ಕ್ರಮ - ಸಚಿವ ಬಂಗಾರಪ್ಪ

error: Content is protected !!
Scroll to Top