ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ➤ ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.30 ಬ್ಯಾಟರಾಯನಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಪಿ. ವೆಂಕಟೇಶ್ (62) ಎಂಬುವವರು ಮೃತಪಟ್ಟಿದ್ದಾರೆ. ದೀಪಾಂಜಲಿನಗರ ಮೆಟ್ರೊ ನಿಲ್ದಾಣ ಬಳಿ ಇರುವ ಮೇಲ್ಸೇತುವೆಯಲ್ಲಿ ಎದುರಿಗೆ ಹೊರಟಿದ್ದ ದ್ವಿಚಕ್ರ ವಾಹನಕ್ಕೆ ವೆಂಕಟೇಶ್ ಅವರ ವಾಹನ ಡಿಕ್ಕಿ ಹೊಡೆದಿತ್ತು.

ವಾಹನ ಸಮೇತ ಉರುಳಿಬಿದ್ದಿದ್ದ ವೆಂಕಟೇಶ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಚಿಕಿತ್ಸೆಗಾಗಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Also Read  ನವಂಬರ್ 24 ಉಡುಪಿಯಲ್ಲಿ ಹಿಂದೂ ಧರ್ಮ ಸಂಸತ್ ಅಧಿವೇಶನ ► ಕಡಬದಲ್ಲಿ ಸಮಾಲೋಚನಾ ಸಭೆ ಹಾಗೂ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ

 

 

error: Content is protected !!
Scroll to Top