(ನ್ಯೂಸ್ ಕಡಬ) newskadaba.com ಕಡಬ, ಮೇ.29. ಕಡಬ ಪರಿಸರದಲ್ಲಿ ಗುಡುಗು ಸಹಿತ ಭಾರೀ ಗಾಳಿ – ಮಳೆಯಾಗಿದ್ದು, ನೆಟ್ಟಣ ಸಮೀಪ ಎರಡು ಕಾರುಗಳ ಮೇಲೆ ಮರ ಬಿದ್ದ ಘಟನೆ ಸೋಮವಾರ ಸಾಯಂಕಾಲ ನಡೆದಿದೆ.
ರಾಜ್ಯ ಅರಣ್ಯ ಇಲಾಖೆಯ ನೆಟ್ಟಣ ಮರ ಸಂಗ್ರಹಣಾ ಘಟಕದ ಸಮೀಪ ಓಮ್ನಿ ಕಾರು ಹಾಗೂ ನ್ಯಾನೋ ಕಾರುಗಳ ಮೇಲೆ ಮರ ಬಿದ್ದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು. ರಸ್ತೆ ಬದಿಯಲ್ಲಿ ಅಪಾಯಕಾರಿ ಹಾಲು ಮಡ್ಡಿ ಮರವನ್ನು ತೆರವುಗೊಳಿಸದೆ ಇರುವುದೇ ಇದಕ್ಕೆಲ್ಲ ಕಾರಣ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಇದರ ಜೊತೆಗೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಪಾರ ನಷ್ಟ ಸಂಭವಿಸಿದೆ.