ವಿಮಾನದ ತುರ್ತುದ್ವಾರ ತೆರೆದ ಪ್ರಯಾಣಿಕ ➤ ಉಸಿರಾಟ ಸಮಸ್ಯೆಗೆ ಸಿಲುಕಿ 9 ಮಂದಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಸಿಯೋಲ್, ಮೇ.27. ದಕ್ಷಿಣ ಕೊರಿಯಾದ ಡಾಯೆಗು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುತ್ತಿದ್ದ  ವಿಮಾನವೊಂದು ಪ್ರಯಾಣಿಕ ಲ್ಯಾಂಡಿಂಗ್‌ಗೆ ಮುಂಚೆಯೇ ತುರ್ತುದ್ವಾರ ತೆರೆದಿದ್ದು ಇದರಿಂದ  9 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.

200 ಪ್ರಯಾಣಿಕರನ್ನು ಏಷಿಯಾನಾ ಏರ್‌ಲೈನ್ಸ್‌ನ ವಿಮಾನವೊಂದು ಹೊತ್ತು ನಿಲ್ದಾಣದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ಲ್ಯಾಂಡಿಂಗ್‌ ಇನ್ನೂ 200 ಮೀಟರ್‌ (650 ಅಡಿ) ಎತ್ತರವಿರುವಾಗಲೇ ಪ್ರಯಾಣಿಕರೊಬ್ಬರು ತುರ್ತು ದ್ವಾರ ತೆರೆದಿದ್ದು, ಇದರಿಂದ ಗಾಳಿ ವಿಮಾನದ ಒಳನುಗ್ಗಿದ ರಭಸಕ್ಕೆ 9 ಪ್ರಯಾಣಿಕರಿಗೆ ಉಸಿರಾಟದ ಸಮಸ್ಯೆಯಾಗಿದೆ.

Also Read  ಮಠ, ದೇವಸ್ಥಾನಗಳಿಗೆ ಸಿಎಂ ಸಿದ್ದರಾಮಯ್ಯ 20 ಕೋಟಿ ರೂ. ಅನುದಾನ ಘೋಷಣೆ

 

error: Content is protected !!
Scroll to Top