ಮಂಗಳೂರು: ‘ತಿಂಗಳ‌ ಒಳಗಾಗಿ ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ’ ➤ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.27. ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ನೀಡಿರುವ ಉಚಿತ ಗ್ಯಾರೆಂಟಿ‌ ಭರವಸೆಯನ್ನು ಇನ್ನೂ ಅದನ್ನು ಈಡೇರಿಸಿಲ್ಲ. ಒಂದು ತಿಂಗಳ‌ ಒಳಗಾಗಿ ಉಚಿತ ಘೋಷಣೆ ಜಾರಿಯಾಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದ್ದು, ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ‌ ಅವರಿಗೆ ಈ‌ ಹಿಂದೆ ಬಿಜೆಪಿ ಸರಕಾರ ಅನುಕಂಪದ ಆಧಾರದಲ್ಲಿ ಕೆಲಸ‌ ಕೊಡಿಸಿತ್ತು.‌ ಇದೀಗ ಕಾಂಗ್ರೆಸ್ ಸರಕಾರದ ಅವರನ್ನು ಉದ್ಯೋಗದಿಂದ ಬಿಡುಗಡೆ ಮಾಡಿದೆ.‌

Also Read  ರಸ್ತೆ ಅಪಘಾತ: ಸವಾರ ಮೃತ್ಯು..!

error: Content is protected !!
Scroll to Top