ಶಾಸಕರು ತಾಳ್ಮೆಯಿಂದರಬೇಕು ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ.!➤ಡಿಕೆ ಶಿವಕುಮಾರ್

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.27 ಸಚಿವ ಸ್ಥಾನ ಸಿಗದೆ ಹೋಗಿರುವುದಕ್ಕೆ ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರಲ್ಲಿ ಅಸಮಾಧಾನ, ಹತಾಷೆ ಮೂಡಿದೆ. ನೊಂದ ಶಾಸಕರಿಗೆ ಉಪ ಮುಖ್ಯಮಂತ್ರಿ ಡಿಕೆ  ಶಿವಕುಮಾರ್ ‘’ಎಲ್ಲರೂ ತಾಳ್ಮೆಯಿಂದರಬೇಕು ಮುಂದೆ ಎಲ್ಲರಿಗೆ ಅವಕಾಶ ಸಿಗಲಿದೆ’’ ಎಂದು ಎಚ್ಚರಿಕೆ ರೂಪದ ಸಲಹೆ ನೀಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿಗಳು ಹಿಂದೆ, ಧರಂ ಸಿಂಗ್ ಅವರ ಅವಧಿ ಮತ್ತು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ತನಗೂ ಅವಕಾಶ ಸಿಕ್ಕಿರಲಿಲ್ಲ, ಆಗ ತಾನು ತಾಳ್ಮೆಯಿಂದ ಇದ್ದ ಹಾಗೆಯೇ, ಈಗಿನ ಅವಕಾಶವಂಚಿತರು ಸಹ ತಾಳ್ಮೆಯಿಂದ ಇರಬೇಕು ಎಂದರು.

Also Read  ಬಿಗ್ ಬಾಸ್-9 ರ ಗ್ರ್ಯಾಂಡ್ ಫಿನಾಲೆ ಪ್ರವೇಶಿಸಿದ ರೂಪೇಶ್ ಶೆಟ್ಟಿ

 

 

error: Content is protected !!
Scroll to Top