ಪತಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ.!➤ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಛತ್ತೀಸ್​ಗಢ,ಮೇ.27  ಪತಿಯನ್ನೇ ಸುಪಾರಿ ಕೊಟ್ಟು ಪತ್ನಿ ಕೊಲೆ ಮಾಡಿಸಿರುವ ದಾರುಣ ಘಟನೆಯೊಂದು ಛತ್ತೀಸ್​ಗಢದಲ್ಲಿ ನಡೆದಿದೆ. ಉದ್ಯೋಗಿ ಜಗಜೀವನ್ ರಾಮ್ 2013ರಲ್ಲಿ ಧನೇಶ್ವರಿ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಜಗಜೀವನ್​ ರಾಮ್​ ಮತ್ತು ಧನೇಶ್ವರಿಗೆ ಇಬ್ಬರು ಮಕ್ಕಳಿದ್ದಾರೆ.

ಜಗಜೀವನ್ ರಾಮ್ ಕುಡಿದು ಮನೆಗೆ ಬರುತ್ತಿದ್ದರಿಂದ ದಂಪತಿ ನಡುವೆ ಆಗಾಗ ಜಗಳ ಶುರುವಾಗುತ್ತಿತ್ತು. ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಹೇಗಾದರೂ ಮಾಡಿ ಗಂಡನನ್ನು ದೂರ ಮಾಡಬೇಕೆಂದು ಧನೇಶ್ವರಿ ತುಷಾರ್ ಸೋನಿ ಅಲಿಯಾಸ್ ಗೋಪಿಯನ್ನು ಸಂಪರ್ಕಿಸಿ, ಗಂಡನನ್ನು ಕೊಲ್ಲಲು ಆತನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಳು.

Also Read  17 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಪತ್ತೆ.!

ಪತ್ನಿಯನ್ನು ಕೊಂದ, ಬಳಿಕ ಪೊಲೀಸರ ಮುಂದೆ ಸುಳ್ಳು ಕಥೆಗಳನ್ನು ಪತ್ನಿ ಹೆಣೆದಿದ್ದಾಳೆ. ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ರೂ ಸಹ ಆರೋಪಿಗಳು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

 

 

error: Content is protected !!
Scroll to Top