ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಗಿಫ್ಟ್ ನೀಡಿದ್ದ ಕುಕ್ಕರ್.!➤ಸ್ಪೋಟಗೊಂಡು ಬಾಲಕಿಗೆ ಗಾಯ

(ನ್ಯೂಸ್ ಕಡಬ)newskadaba.com ರಾಮನಗರ,ಮೇ.27 ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಗಿಫ್ಟ್ ನೀಡಿದ್ದ ಕುಕ್ಕರ್ ಸಿಡಿದು ಬಾಲಕಿ ಗಾಯಗೊಂಡ ಘಟನೆ ರಾಮನಗರ ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಹಾಲಕ್ಷ್ಮಿ(17) ಗಾಯಗೊಂಡ ಬಾಲಕಿ. ಅಡುಗೆ ಮಾಡುವ ವೇಳೆ ಕುಕ್ಕರ್ ಸಿಡಿದು ಮಹಾಲಕ್ಷ್ಮಿ ಮುಖಕ್ಕೆ ಗಾಯಗಳಾಗಿವೆ.

ಆಕೆಯನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಅವರ ಬೆಂಬಲಿಗರು ಮತದಾರರಿಗೆ ಹಂಚಿದ್ದ ಕುಕ್ಕರ್ ಇದಾಗಿದೆ.ಗ್ರಾಮಸ್ಥರು ಕುಕ್ಕರ್ ಗಳನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

 

error: Content is protected !!
Scroll to Top