ರಾಜ್ಯಾದ್ಯಂತ ‘ಕರೆಂಟ್ ಬಿಲ್ ಕಟ್ಬೇಡಿ’ ಅಭಿಯಾನಕ್ಕೆ ವಿಪಕ್ಷಗಳ ಸಿದ್ದತೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮೇ.26. ಕಾಂಗ್ರೆಸ್ ಸರ್ಕಾರದ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ವಿಚಾರವನ್ನು ವಿಪಕ್ಷಗಳು ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಜನರು ಹಲವು ಕಡೆ ಮೆಸ್ಕಾಂ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದರು.

ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುತ್ತಿದೆ. ಇದರ ನಡುವೆ ರಾಜ್ಯಾದ್ಯಂತ ‘ಕರೆಂಟ್ ಬಿಲ್ ಕಟ್ಬೇಡಿ’ ಅಭಿಯಾನಕ್ಕೆ ವಿಪಕ್ಷಗಳು ಸಿದ್ದತೆ ನಡೆಸಿದೆ ಎನ್ನಲಾಗಿದೆ. ಉಚಿತ ವಿದ್ಯುತ್ ಯೋಜನೆ ಮಾತ್ರವಲ್ಲದೇ ಕಾಂಗ್ರೆಸ್ ನ ಐದು ಗ್ಯಾರೆಂಟಿ ಯೋಜನೆ ಈಡೇರಿಸುವಂತೆ ವಿಪಕ್ಷಗಳು ಪಟ್ಟು ಹಿಡಿದಿದೆ.

Also Read  ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ವಾಹನಗಳ ಸಂಚಾರ ನಿಷೇಧ.!

 

error: Content is protected !!
Scroll to Top