(ನ್ಯೂಸ್ ಕಡಬ)newskadaba.com ಗುಜರಾತ್,ಮೇ.26 ಉತ್ತರ ಭಾರತದ ಅತೀ ವಿಶೇಷವಾದ ತಿಂಡಿಗಳಲ್ಲಿ, ಜನಪ್ರಿಯವಾದ ತಿಂಡಿಗಳಲ್ಲಿ ಸಮೋಸಾ ಕೂಡಾ ಒಂದಾಗಿದೆ. ಸಮೋಸಾ ಎಂದರೆ ಹಲವರಿಗೆ ತುಂಬಾ ಇಷ್ಟ. ಹೀಗೆ ಗ್ರಾಹಕರಿಗೆ ಗೋಮಾಂಸ ತುಂಬಿರುವ ಸಾಮೋಸ ತಿನ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಇಸ್ಮಾಯಿಲ್ ಯುಸೂಫ್ನನ್ನು ಬಂಧಿಸಿದ್ದಾರೆ.
ಸೂರತ ಜಿಲ್ಲೆಯ ಕೋಸಾಡಿ ಗ್ರಾಮದಲ್ಲಿ ಖಾದ್ಯಪದಾರ್ಥಗಳ ಮಾರಾಟ ಮಾಡುತ್ತಿದ್ದ ಇಸ್ಮಾಯಿಲ್ ಯುಸೂಫ್ ಗೋಮಾಂಸ ತುಂಬಿದ್ದ ಸಾಮೋಸ ಮಾರುತ್ತಿದ್ದನು. ಖಚಿತ ಮಾಹಿತಿಯೆ ಮರೆಗೆ ಪೊಲೀಸರು ದಾಳಿ ಮಾಡಿ ಆರೋಪಿಯ ಜೆತೆಗೆ ಗೋಮಾಂಸವನ್ನು ತುಂಬಿದ ಸಮೋಸಾಗಳನ್ನು ವಶಪಡಿಸಿಕೊಂಡಿದ್ದಾರೆ.
Also Read ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದರೆ ಕಠಿಣ ಕ್ರಮ ➤ ಗೃಹ ಸಚಿವ ಬೊಮ್ಮಾಯಿ ಖಡಕ್ ವಾರ್ನಿಂಗ್