ಕಡಬ: ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆ ಬಿದ್ದ ಮಹಿಳೆ

(ನ್ಯೂಸ್ ಕಡಬ)newskadaba.com ಆಲಂಕಾರು, ಮೇ.26. ಚಲಿಸುತ್ತಿದ್ದ ಬಸ್ಸಿನಿಂದ ಮಹಿಳೆಯೊಬ್ಬರು ರಸ್ತೆಗೆ ಬಿದ್ದ ಘಟನೆ ಆಲಂಕಾರು ಬಳಿ ನಡೆದಿದೆ.


ಮಹಿಳೆಯನ್ನು ಶಾರದಾ ನಗರದ ಗುಲಾಬಿ ಎಂದು ಗುರುತಿಸಲಾಗಿದೆ. ಗೋಳಿತ್ತಡಿ ಎಂಬಲ್ಲಿಂದ ಬಸ್ಸ್‌ ನಲ್ಲಿ ಬಂದ ಮಹಿಳೆ ಆಲಂಕಾರಿನ ಮುಖ್ಯ ಪೇಟೆ ಸಮೀಪಿಸುತ್ತಿದಂತೆ ಬಸ್ಸಿನಿಂದ ಕೆಳಗೆ ಬಿದ್ದಿದ್ದಾರೆ.


ತಕ್ಷಣ ಅವರಿಗೆ ಸ್ಥಳೀಯ ಕ್ಲೀನಿಕ್‌ ನಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಸ್ಸಿನ ಚಾಲಕ ಶಿವಕುಮಾರ್‌ 108 ಆಂಬ್ಯುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಂಗಳೂರು ಕೇಂದ್ರ ನಿಲ್ದಾಣದಿಂದ ಹೊರಟ ಬಸ್ಸ್‌ ಉಪ್ಪಿನಂಗಡಿ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿತ್ತು.

Also Read  ಮೃತ ಗಂಡನ ಪೋಷಕರಿಗೆ ಸೊಸೆ ಜೀವನಾಂಶ ಕೊಡಬೇಕಾಗಿಲ್ಲ..! ➤ಮಹತ್ವದ ಆದೇಶ ಹೊರಡಿಸಿದ 'ಹೈಕೋರ್ಟ್'.!

 

error: Content is protected !!