17 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಪತ್ತೆ.!

(ನ್ಯೂಸ್ ಕಡಬ)newskadaba.com ದೆಹಲಿ,ಮೇ.26   ಅಪಹರಣಕ್ಕೊಳಗಾಗಿದ್ದ ಬಾಲಕಿ 17 ವರ್ಷಗಳ ನಂತರ ಪತ್ತೆಯಾಗಿರುವ ಘಟನೆ ದೆಹಲಿಯ ಗೋಕಲ್ಪುರಿಯಲ್ಲಿ ನಡೆದಿದೆ. 2006ರಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ಪೋಷಕರ ದೂರಿನ ಮೇರೆಗೆ ದೆಹಲಿಯ ಗೋಕಲ್ಪುರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 363ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸೀಮಾಪುರಿ ಪೊಲೀಸ್ ಠಾಣೆಯ ತಂಡವು ರಹಸ್ಯ ಮಾಹಿತಿಯ ಮೇರೆಗೆ ಬಾಲಕಿಯನ್ನು ಪತ್ತೆ ಹಚ್ಚಿದೆ. ಹುಡುಗಿ ತನ್ನ ಮನೆಯಿಂದ ನಾಪತ್ತೆಯಾದ ನಂತರ ಉತ್ತರ ಪ್ರದೇಶದ ಚೆರ್ದಿಹ್ ಜಿಲ್ಲೆಯ ಬಲಿಯಾ ಗ್ರಾಮದಲ್ಲಿ ದೀಪಕ್ ಎಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ನಂತರ, ಕೆಲವು ವರ್ಷಗಳ ಆಕೆ ದೀಪಕ್​ನನ್ನು ತೊರೆದು ಪ್ರತ್ಯೇಕವಾಗಿ ಗೋಕಲ್ಪುರಿಯಲ್ಲಿ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ.

Also Read  ನೂಜಿಬಾಳ್ತಿಲ: ಶಾಸಕರಿಂದ ಮನೆ ಭೇಟಿ

 

error: Content is protected !!
Scroll to Top