ರೈಲಿನ ಇಂಜಿನ್ ಕಳಚಿ ಬೇರ್ಪಟ್ಟ ಬೋಗಿಗಳು.!➤ಮಾರ್ಗ ಮಧ್ಯೆ ಪ್ರಯಾಣಿಕರ ಪರದಾಟ

(ನ್ಯೂಸ್ ಕಡಬ)newskadaba.com ಶಿವಮೊಗ್ಗ,ಮೇ.26  ತಾಳಗುಪ್ಪಾ- ಬೆಂಗಳೂರು ಎಕ್ಸಪ್ರೆಸ್ ರೈಲು ಭದ್ರಾವತಿ ಸಮೀಪ ಇಂಜಿನ್ ಕಳಚಿ ಬೋಗಿಗಳ ಬಿಟ್ಟು ಮುಂದೆ ಹೋಗಿರುವ ಘಟನೆ ನಡೆದಿದೆ. ಬೋಗಿಗಳು ಮಾರ್ಗ ಮಧ್ಯೆದಲ್ಲಿಯೇ ಬೇರ್ಪಟ್ಟ ಕಾರಣ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟ ರೈಲು ಬೆಳಗ್ಗೆ 7 ಗಂಟೆಗೆ ಬಿದರೆ ಬಳಿ ಬರುತ್ತಿದ್ದಂತೆ ಇಂಜಿನ್​ನಿಂದ ಬೋಗಿಗಳು ಬೇರ್ಪಟ್ಟಿವೆ. ಕಪ್ಲಿಂಗ್ ಸಡಿಲಗೊಂಡ ಹಿನ್ನೆಲೆ ಬೋಗಿಗಳಿಂದ ಇಂಜಿನ್ ಬೇರ್ಪಟ್ಟಿದೆ ಎಂದು ತಿಳಿದು ಬಂದಿದೆ.ಬಿದರೆ ಪ್ರದೇಶ ಸಮತಟ್ಟಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Also Read  ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ➤ 50 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ಭಡ್ತಿ

 

 

error: Content is protected !!
Scroll to Top