ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಡಬಲ್ ಮರ್ಡರ್

(ನ್ಯೂಸ್ ಕಡಬ)newskadaba.com ಧಾರವಾಡ, ಮೇ.26. ನಗರದ ಕಮಲಾಪುರ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಹತ್ಯೆ ನಡೆದಿದೆ ಎಂದು ವರದಿ ತಿಳಿಸಿದೆ.


ಮಹಮ್ಮದ್ ಕುಡಚಿ, ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಗುರುತಿಸಲಾಗಿದೆ. ಮನೆ ಎದುರು ಕುಳಿತಾಗ ದಾಳಿ ಮಾಡಿದ ಗುಂಪು ಮಚ್ಚಿನಿಂದ ಕೊಚ್ಚಿ ಮಹಮ್ಮದ್ ಕುಡಚಿ ಅವರನ್ನು ಕೊಲೆ ಮಾಡಲಾಗಿದೆ.


ಕುಡಚಿ ಅವರ ಮನೆಯಿಂದ ಅನತಿ ದೂರದಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ಆ ಶವ ಕೂಡ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಡಚಿ ಅವರ ಮನೆಯಿಂದಲೇ ಆ ವ್ಯಕ್ತಿ ಕೂಡ ಓಡಿ ಹೋಗಿದ್ದಾನೆ ಎಂದು ಶಂಕಿಸಲಾಗಿದೆ.

Also Read  ಕುವೈಟ್ ನಲ್ಲಿ ಅಗ್ನಿ ಅವಘಡ ➤ ಕರಾವಳಿಯ ಯುವಕ ಮೃತ್ಯು

 

error: Content is protected !!
Scroll to Top