ಗೃಹಲಕ್ಷ್ಮಿಯೋಜನೆ ಅಡಿ ಹೆಸರು ನೋಂದಾವಣೆ➤ ಸೈಬರ್‌ ಸೆಂಟರ್‌ಗಳ ಬಳಿ ಮುಗಿಬಿದ್ದ ಮಹಿಳೆಯರು.!  

(ನ್ಯೂಸ್ ಕಡಬ)newskadaba.com ಕೋಲಾರ,ಮೇ.26   ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅಡಿ ಹೆಸರು ನೋಂದಾಯಿಸಲು ಗುರುವಾರ ಮುಂಜಾನೆ ನೂರಾರು ಮಹಿಳೆಯರು ನಗರದ ಸೈಬರ್‌ ಸೆಂಟರ್‌ಗಳಿಗೆ ಮುಗಿಬಿದ್ದಿದ್ದರು.

ಪಡಿತರ ಚೀಟಿಗೆ ಮೇ 31ರ ಒಳಗಾಗಿ ಆಧಾರ್‌ ಜೋಡಣೆ ಮಾಡಿ ಹೆಸರು ನೋಂದಾಯಿಸಿದರೆ ಮಾತ್ರ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ಸಿಗುತ್ತದೆ ಎಂಬ ಸುಳ್ಳು ಸಂದೇಶ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್‌ಆಯಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ಇದನ್ನು ನಂಬಿದ ಮಹಿಳೆಯರು ಎಲ್ಲ ದಾಖಲೆಗಳೊಂದಿಗೆ ಸೈಬರ್‌ ಸೆಂಟರ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ನಗರದ ಬಹುತೇಕ ಸೈಬರ್ ಸೆಂಟರ್‌ಗಳು ಮಹಿಳೆಯರಿಂದ ತುಂಬಿದ್ದವು.

Also Read  ಬಂಟ್ವಾಳ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನ

 

 

 

error: Content is protected !!
Scroll to Top