(ನ್ಯೂಸ್ ಕಡಬ)newskadaba.com ಕಾಪು, ಮೇ.26. ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರ್ ರೇಸ್ ಮಾಡಲು ಹೋದು ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಈ ಸಂಬಂಧ ನಾಲ್ವರು ಚಾಲಕರ ಸಹಿತ ನಾಲ್ಕು ವಾಹನಗಳನ್ನು ಕಾಪು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ವಾಹನ ಚಾಲಕರನ್ನು ಉಡುಪಿಯ ಶಾನೂನ್ ಡಿಸೋಜ(25), ಉಡುಪಿ ಕೊಡಂತೂರಿನ ವಿವೇಕ್(23), ಉದ್ಯಾವರ ಗುಡ್ಡೆ ಅಂಗಡಿ ನಿವಾಸಿ ಅಯಾನ್( 24) ಹಾಗೂ ಕುಂಜಿಬೆಟ್ಟು ನಿವಾಸಿ ಮಿಶಾಲುದ್ದೀನ್ (23) ಎಂದು ಗುರುತಿಸಲಾಗಿದೆ. ಇವರ ಮಹೀಂದ್ರಾ ಜೀಪು, ಕ್ರೆಟಾ ಕಾರು, ಫಾರ್ಚುನರ್ ಕಾರು, ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
