ಟ್ರಕ್  ವಾಹನ CRPF ವಾಹನಕ್ಕೆ ಡಿಕ್ಕಿ.!➤ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ,ಮೇ.25 ಜಮ್ಮು -ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ  ವೇಗವಾಗಿ ಬಂದ ಟ್ರಕ್ ಸ್ಕಿಡ್ ಆಗಿ ರಸ್ತೆ ಬದಿ ನಿಂತಿದ್ದ CRPF ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅಪಘಾತದ ದೃಶ್ಯ ಆ ಪ್ರದೇಶದಲ್ಲಿನ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ.

CRPF ಒದಗಿಸಿದ ಆಘಾತಕಾರಿ ದೃಶ್ಯಾವಳಿಗಳಲ್ಲಿ, ರಸ್ತೆಯ ಪಕ್ಕದಲ್ಲಿ CRPF ವಾಹನವನ್ನು ನಿಲ್ಲಿಸಿರುವುದನ್ನು ತೋರಿಸುತ್ತದೆ. ವಿರುದ್ಧ ದಿಕ್ಕಿನಿಂದ ಬರುವ ಟ್ರಕ್ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವಾಗ ಅದು ಸ್ಕಿಡ್ ಆಗಿ ಸಿಆರ್‌ಪಿಎಫ್ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ರಸ್ತೆ ಒದ್ದೆಯಾಗಿರುವುದರಿಂದ, ಟ್ರಕ್ ಸ್ಕಿಡ್ ಆಗಿರಬಹುದು ಎನ್ನಲಾಗಿದೆ.

Also Read  ಕಣ್ಣೀರು ಹಾಕಿದ ಮೊಸಳೆಯ ಚಿತ್ರ - 56 ಇಂಚಿನ ಚರ್ಮಕ್ಕೆ ನೋವು ತಿಳಿಯಲು 79 ದಿನ ಎಂಬ ತಲೆಬರಹ

 

 

 

error: Content is protected !!
Scroll to Top