ಹಣ ವರ್ಗಾವಣೆ ಪ್ರಕರಣ ➤ ವಿದೇಶ ಪ್ರಯಾಣಕ್ಕೆ ನಟಿ ಜಾಕ್ವೆಲಿನ್‌ಗೆ ದೆಹಲಿ ಕೋರ್ಟ್ ಅನುಮತಿ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.24. 200 ಕೋಟಿ ರೂ. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಅವರಿಗೆ ವಿದೇಶಿ ಪ್ರಯಾಣ ಕೈಗೊಳ್ಳಲು ದೆಹಲಿ ಕೋರ್ಟ್ ಅನುಮತಿ ನೀಡಿದೆ.


ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆ ಜಾಕ್ವೆಲಿನ್‌ ವಿದೇಶಕ್ಕೆ ಪ್ರಯಾಣಿಸುವಂತಿಲ್ಲವೆಂದು ನಿರ್ಬಂಧ ಹೇರಲಾಗಿತ್ತು. ಆದರೆ ಐಐಎಫ್ಎ ಅವಾರ್ಡ್‌ ಸಮಾಂಭದಲ್ಲಿ ಭಾಗಿಯಾಗಬೇಕಿರುವ ಹಾಗೂ ಶೂಟಿಂಗ್‌ ಇರುವ ಹಿನ್ನೆಲೆ ನಟಿ ವಿದೇಶಿ ಪ್ರಯಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

Also Read  ಪತಿಯ ವಶಕ್ಕೆ ಮಗು ನೀಡದ ಪತ್ನಿ !       ➤ 'ಹೈಕೋರ್ಟ್'ನಿಂದ ಜಾಮೀನು ರಹಿತ ವಾರೆಂಟ್ ಜಾರಿ

error: Content is protected !!
Scroll to Top