(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮೇ.24. ಇತಿಹಾಸ ಪ್ರಸಿದ್ಧ ನರಸಿಂಹ ಗಡ, ಗಡಾಯಿಕಲ್ಲು ಇದಕ್ಕೆ ಸಿಡಿಲು ಬಡಿದಿದೆ ಎಂದು ವರದಿ ತಿಳಿಸಿದೆ.
ಸಿಡಿಲಿನ ಹೊಡೆತಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಮಳೆ ಬಂದ ಕಾರಣದಿಂದಾಗಿ ಬೆಂಕಿ ನಂದಿ ಹೋಗಿದೆ ಎನ್ನಲಾಗಿದೆ. ಕಳೆದ ಬಾರಿಯೂ ಮಳೆಗಾಲ ಪ್ರಾರಂಭದಲ್ಲಿ ಸಿಡಿಲು ಬಡಿದು ದೊಡ್ಡ ಸ್ಫೋಟದ ಶಬ್ದದೊಂದಿಗೆ ಕಲ್ಲು ಕುಸಿದುಬಿದ್ದು ಸ್ಥಳೀಯರು ಭಯಭೀತರಾಗಿದ್ದರು.
