ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಸ್ಥಿತಿ.!➤ ಜನರ ಪರದಾಟ  

(ನ್ಯೂಸ್ ಕಡಬ)newskadaba.com ಹುಬ್ಬಳ್ಳಿ,ಮೇ.24 ಬಡವರ ಸಂಜೀವಿನಿ ಎಂದು ಹೆಸರಾದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಸ್ಥಿತಿ ಮಳೆಯಿಂದಾಗಿ ಬಯಲಾಗಿದೆ. ನಗರದಲ್ಲಿ ಸುರಿದ ಬಾರಿ ಮಳೆಗೆ ಕಿಮ್ಸ್ ಆಸ್ಪತ್ರೆಯ ಒಳಗಡೆಯೇ ನೀರು ಬಂದು ರೋಗಿಗಳು, ರೋಗಿಗಳ ಸಂಬಂಧಿಕರು, ಕಿಮ್ಸ್ ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಪರದಾಡಿದ ದ್ರಶ್ಯಗಳು ಕಿಮ್ಸ್ ಆಸ್ಪತ್ರೆಯ ಐ‌ಸಿ‌ಯು ಮುಂಭಾಗದಲ್ಲಿ ಕಂಡು ಬಂದಿದೆ.

ಇನ್ನು ಕಿಮ್ಸ್ ಆಸ್ಪತ್ರೆಯ ನಿರ್ವಹಣೆಗಾಗಿ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಅನುದಾನ ಹರಿದು ಬಂದರು ಕೂಡಾ ಆ ಅನುದಾನ ಹರಿದು ಎಲ್ಲೋ ಸೇರುವುದರಿಂದ, ಮಳೆಯ ನೀರು ಮಾತ್ರ ಕಿಮ್ಸ್ ಆಸ್ಪತ್ರೆಯ ಒಳಗಡೆ ಸೇರುತ್ತಿದ್ದು ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಇಲ್ಲಿನ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Also Read  ಬಂಧನ ಮತ್ತು ಕಿರುಕುಳಗಳಿಂದ ನಮ್ಮನ್ನು ತಡೆಯಲಾಗದು ➤ ಪಾಪ್ಯುಲರ್ ಫ್ರಂಟ್

 

error: Content is protected !!
Scroll to Top