ವಿವಾಹಿತ ಮಹಿಳೆಯನ್ನು ಮತಾಂತರ ಮಾಡಲು ಯತ್ನಿಸಿದ ಆರೋಪಿ ಆರೆಸ್ಟ್.!

(ನ್ಯೂಸ್ ಕಡಬ)newskadaba.com  ಉತ್ತರ ಪ್ರದೇಶ,ಮೇ.24 ವಿವಾಹಿತ ಮಹಿಳೆ ಮೇಲೆ ದೈಹಿಕ ದೌರ್ಜನ್ಯವೆಸಗಿ, ಆಕೆಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿ ಹಾಗೂ ಆತನ ಸಹೋದರನನ್ನು ಸೇರಿ ಮೂವರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಕೆಲ ಸಮಯದ ಹಿಂದೆ ಆರೋಪಿ ಆರೀಫ್‌ ಖಾನ್‌ ವಿವಾಹಿತ ಮಹಿಳೆಗೆ ಅಭಯ್‌ ಮಿಶ್ರಾ ಎಂದು ಪರಿಚಯಿಸಿ ಕರೆ ಮಾಡಿದ್ದಾನೆ.

ಮಹಿಳೆಗೆ ಅಭಯ್‌ ಮಿಶ್ರಾನ ನಿಜವಾದ ಮುಖವಾಡ ಬಯಲಿಗೆ ಬಂದಿದೆ. ಆತ ಆರೀಫ್‌ ಖಾನ್‌ ಎನ್ನುವುದು ಗೊತ್ತಾಗಿದೆ.ಈತ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ 25 ದಿನಗಳ ಕಾಲ ಹಿಡಿದಿಟ್ಟುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾನೆ. ಬುರ್ಖಾ ಧರಿಸಿ, ನಮಾಜ್‌ ಮಾಡಲು ಆತ ಹೇಳುತ್ತಿದ್ದ ಎಂದು ಮಹಿಳೆ ಹೇಳಿದ್ದಾರೆ. ಸಂತ್ರಸ್ತ ಮಹಿಳೆ  ಗಂಡನ ಜೊತೆ ಹೋಗಿ ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Also Read  ಬಸ್ ಅಪಘಾತ    35 ಪ್ರಯಾಣಿಕರು ಮೃತ್ಯು      

 

 

error: Content is protected !!
Scroll to Top