ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಗ್ರಾಮ ಲೆಕ್ಕಿಗ.!➤ಆರೋಪಿ ಆರೆಸ್ಟ್

(ನ್ಯೂಸ್ ಕಡಬ)newskadaba.com ಕೇರಳ,ಮೇ.24 ಲಂಚ ಸ್ವೀಕರಿಸುವಾಗ ಕೇರಳದ ಪಾಲಕ್ಕಾಡ್​ ಜಿಲ್ಲೆಯಲ್ಲಿ​ ಗ್ರಾಮ ಲೆಕ್ಕಿಗನೊಬ್ಬ ಸಿಕ್ಕಿಬಿದ್ದಿದ್ದಾನೆ.ಪಾಲಕ್ಕಯಂ ಗ್ರಾಮ ಕಚೇರಿಯಲ್ಲಿ ಫೀಲ್ಡ್​ ಆಫೀಸರ್​ ಆಗಿ ಕೆಲಸ ಮಾಡುತ್ತಿದ್ದ ಸುರೇಶ್​ ಕುಮಾರ್​ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಸ್ಥಳ ಪ್ರಮಾಣಪತ್ರ ನೀಡುವುದಕ್ಕಾಗಿ 2500 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ಮಾಡಿ ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ನಂತರ ಅಧಿಕಾರಿಗಳ ಸುರೇಶ್​ ಕುಮಾರ್​ ಅವರ ಮನ್ನಾರಕಟ್ಟೆ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಆತನ ಮನೆ ಮೇಲೆ ದಾಳಿ ಮಾಡಿದಾಗ ಅಲ್ಲಿ ಪತ್ತೆಯಾದ ಸಂಪತ್ತನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಗ್ರಾಮ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಕುಮಾರ್​ ಮನೆಯಲ್ಲಿ 35 ಲಕ್ಷ ರೂಪಾಯಿ ನಗದು ಹಾಗೂ 17 ಕೆಜಿ ಚಿನ್ನಾಭರಣ ಪತ್ತೆಯಾಗಿದ್ದು, ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Also Read  ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆಗೆ ಕೋರ್ಟ್ ಸಮನ್ಸ್

 

 

error: Content is protected !!
Scroll to Top