ವಿದ್ಯುತ್ ಬಿಲ್ ವಸೂಲಿಗೆ ಬಂದವರ ಮೇಲೆ ಚಪ್ಪಲಿಯಿಂದ ಹಲ್ಲೆ

(ನ್ಯೂಸ್ ಕಡಬ)newskadaba.com ಕೊಪ್ಪಳ, ಮೇ.24. 200 ಯುನಿಟ್ ಕರೆಂಟ್ ಫ್ರೀ ಕೊಡ್ತೀವಿ ಅಂತ ಕಾಂಗ್ರೆಸ್ ಸರ್ಕಾರ ಹೇಳಿದ್ದು, ಜನ ಇದನ್ನೇ ನೆಪ ಮಾಡಿಕೊಂಡು ಕರೆಂಟ್ ಬಿಲ್ ಕಟ್ಟಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಅಂತೆಯೇ ಇದೀಗ ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಬಂದವರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಕನಪಳ್ಳಿ ಗ್ರಾಮದ ಚಂದ್ರಶೇಖರಯ್ಯ ಎಂಬವರು ಕಳೆದ ಆರು ತಿಂಗಳಿನಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಲೈನ್ ಮ್ಯಾನ್ ಮಂಜುನಾಥ ಬಿಲ್ ವಸೂಲಾತಿಗೆ ತೆರಳಿದ್ದರು. ಈ ವೇಳೆ ವಿದ್ಯುತ್ ಬಿಲ್ ಕಟ್ಟಲ್ಲ, ಕರೆಂಟ್ ಫ್ರೀ ಎಂದು ಹೇಳಿದ್ದಾರೆ, ಅಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಲಾಗಿದೆ.

Also Read  ಅ.02 ರಂದು "ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರ" ಲೋಕಾರ್ಪಣೆ

error: Content is protected !!
Scroll to Top