ಲೈನ್​ಮ್ಯಾನ್​ಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಕೊಪ್ಪಳ,ಮೇ.24 ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್​ ಬಿಲ್​ ವಿಚಾರದಲ್ಲಿ ಲೈನ್​ಮ್ಯಾನ್​ ಮತ್ತು ಜನಸಾಮಾನ್ಯರ ನಡುವೆ ಜಟಾಪಟಿಗಳು ನಡೆಯುತ್ತಿದೆ. ಅಧಿಕಾರಕ್ಕೆ ಬಂದರೆ 200 ಯೂನಿಟ್​ ಉಚಿತ ಎಂದು ಕಾಂಗ್ರೆಸ್​ ಹೇಳಿತ್ತು.

ಇದೀಗ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೆಲ ಜನರು ವಿದ್ಯುತ್​ ಬಿಲ್​ ಕಟ್ಟುವುದಿಲ್ಲ ಎಂದು ಲೈನ್​ಮ್ಯಾನ್​ಗಳ ಜತೆ ಜಗಳಕ್ಕೆ ಇಳಿದಿದ್ದಾರೆ.ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವಿದ್ಯುತ್​ ಬಿಲ್​ ವಸೂಲಿಗೆ ಬಂದ ಲೈನ್​ಮ್ಯಾನ್​ ಮೇಲೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.

Also Read  ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದ ಕಾರು..! ➤ ದಂಪತಿಗಳಿಬ್ಬರು ಮೃತ್ಯು

 

 

error: Content is protected !!
Scroll to Top