2,000.ರೂ ನೋಟು ಬದಲಾವಣೆ ಪ್ರಕ್ರಿಯೆ ಆರಂಭ➤ಮೊದಲ ದಿನವೇ ದೇಶದ ಹಲವೆಡೆ ಗೊಂದಲ

(ನ್ಯೂಸ್ ಕಡಬ)newskadaba.com ವದೆಹಲಿ,ಮೇ.23 ಇಂದಿನಿಂದ 2,000 ರೂಪಾಯಿ ನೋಟು ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಮೊದಲ ದಿನವೇ ದೇಶದ ಹಲವೆಡೆ ನೋಟು ವಿನಿಮಯ ವಿಚಾರದಲ್ಲಿ ಗುರುತಿನ ಚೀಟಿ ಮತ್ತು ಅರ್ಜಿಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿದೆ.

ಸಾಕ್ಷಿಯನ್ನಾಗಿ ಗುರುತಿನ ಚೀಟಿ ನೀಡುವಂತೆ ಕೆಲವು ಬ್ಯಾಂಕ್​ಗಳು ಒತ್ತಾಯ ಮಾಡುತ್ತಿವೆ ಎಂದು ಗ್ರಾಹಕರು ಆರೋಪ ಮಾಡಿದ್ದು, ಇದು ಬ್ಯಾಂಕುಗಳಲ್ಲಿನ ಸ್ಥಿರವಾದ ನೀತಿಯ ಕೊರತೆಯನ್ನು ಸೂಚಿಸುತ್ತದೆ.

ಇನ್ನು ಕೆಲವರು ನಮ್ಮ ಬಳಿ ಯಾವುದೇ ಗುರುತಿನ ಚೀಟಿ ಕೇಳಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೆಲವೆಡೆ ನೋಟು ವಿನಿಮಯ ಮಾಡಿಕೊಳ್ಳಲು ನಿರಾಕರಿಸುತ್ತಿರುವ ಬ್ಯಾಂಕ್​ಗಳು, ವಿನಿಮಯ ಬದಲಾಗಿ ಹಣವನ್ನು ಡೆಪಾಸಿಟ್​ ಮಾಡುವಂತೆ ಹೇಳುತ್ತಿವೆ.

Also Read  ಇಂದು ರಾಹುಲ್ ಗಾಂಧಿ ವಯನಾಡ್ ಗೆ ಭೇಟಿ..!

 

 

 

error: Content is protected !!
Scroll to Top