ಆಟೋಗೆ  ಡಿಕ್ಕಿಯಾದ ಬೈಕ್➤ಒಬ್ಬರು ಮೃತ್ಯು, ನಾಲ್ವರಿಗೆ ಗಾಯ

(ನ್ಯೂಸ್ ಕಡಬ)newskadaba.com ದಾವಣಗೆರೆ ,ಮೇ.23 ಆಟೋ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಡಿಸಿಸಿ ಬ್ಯಾಂಕ್ ಅಧಿಕಾರಿ  ಮೃತಪಟ್ಟ ಘಟನೆ ಜಗಳೂರು ತಾಲೂಕಿನ ಉದ್ದಗಟ್ಟ ಕ್ರಾಸ್ ಬಳಿ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಉದ್ದಗಟ್ಟ ಕ್ರಾಸ್ ಬಳಿ ಆಟೋ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಡಿಸಿಸಿ ಬ್ಯಾಂಕ್ ಕ್ಷೇತ್ರ ವಿಸ್ತರಣಾಧಿಕಾರಿ ಹಾಲಸ್ವಾಮಿ(53) ಮೃತಪಟ್ಟಿದ್ದಾರೆ.

ಹಾಲಸ್ವಾಮಿ ಹಿರೇಮಲ್ಲನಹೊಳೆ ಗ್ರಾಮದ ಗೊಲ್ಲರಹಟ್ಟಿ ನಿವಾಸಿಯಾಗಿದ್ದಾರೆ. ಅಪಘಾತದಲ್ಲಿ ಆಟೋದಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ ➤ ಪರೀಕ್ಷಾ ಶುಲ್ಕದಲ್ಲಿ ಶೆ.50 ರಷ್ಟು ವಿನಾಯಿತಿ ಘೋಷಣೆ

 

 

error: Content is protected !!
Scroll to Top