ಟ್ರಕ್‌ ಮತ್ತು ಬಸ್‌ ಭೀಕರ ಅಪಘಾತ ➤ 6 ಮಂದಿ ಮೃತ್ಯು, 13 ಜನರು ಗಂಭೀರ

 (ನ್ಯೂಸ್ ಕಡಬ) newskadaba.com. ಮುಂಬೈ, ಮೇ.23. ಟ್ರಕ್‌ ಮತ್ತು ಬಸ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ಮುಂಬೈ-ನಾಗ್ಪುರ ಹಳೆಯ ಹೆದ್ದಾರಿಯಲ್ಲಿ ನಡೆದಿದೆ.

ಮುಂಬೈ-ನಾಗ್ಪುರ ಹಳೆಯ ಹೆದ್ದಾರಿಯ ಬುಲ್ದಾನದ ಸಿಂಧಖೇಡ್ ರಾಜದಲ್ಲಿ ರಾಜ್ಯ ಬಸ್‌ಗೆ ಟ್ರಕ್ ಢಿಕ್ಕಿ ಹೊಡೆದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 13 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.  ಇನ್ನು ಈ ಅಪಘಾತದಲ್ಲಿ 13 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ ಎಂದು ನಾಗ್ಪುರದ ಎಸ್‌ಪಿ ಎಚ್‌ಎಸ್‌ಪಿ ಹೇಳಿದ್ದಾರೆ.

Also Read  ಕೆರೆಗೆ ಆಕಸ್ಮಿಕವಾಗಿ ಬಿದ್ದು ಯುವಕ ಮೃತ್ಯು.!

error: Content is protected !!
Scroll to Top