(ನ್ಯೂಸ್ ಕಡಬ)newskadaba.com ಕಾರ್ಕಳ,ಮೇ.23 ಮಲೆಬೆಟ್ಟು ಮತ್ತು ಕೆರ್ವಾಶೆಯ ನಡುವೆ ಹರಿಯುವ ‘ಸ್ವರ್ಣ ನದಿಯ ಬಾಂಕ ಗುಂಡಿ’ಯಲ್ಲಿ ಯಾರೋ ದುಷ್ಕರ್ಮಿಗಳು ರಾತ್ರಿ ವೇಳೆ ನೀರಿಗೆ “ವಿಷಪ್ರಾಶನ” ಮಾಡಿ ನೀರನ್ನೂ ಕಲುಷಿತಗೊಳಿಸಿದ್ದಾರೆ.
ದಿನನಿತ್ಯ ಕುಡಿಯಲು ಬಳಸುವ ನೀರಿಗೆ “ಗೇರುಬೀಜ ಎಣ್ಣೆ” ಇಲ್ಲವೇ ಯಾವುದೋ “ಕೀಟನಾಶಕ” ಹಾಕಿರುವ ಶಂಕೆ ಇದ್ದು ಇದರಿಂದ ಯಥೇಚ್ಛವಾಗಿ ಮೀನುಗಳ ಮಾರಣ ಹೋಮವಾಗಿದೆ.ಕುಡಿಯುವ ನೀರಿಗೆ ಬರ ಇರುವ ಈ ಸಮಯದಲ್ಲಿ ದಿನನಿತ್ಯದ ಬಳಕೆಗೆ ಆಧಾರವಾಗಿದ್ದ ನೀರಿನ ಮೂಲಕ್ಕೆ ವಿಷ ಪ್ರಾಶನ ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ.