ದಂಪತಿ ಕಲಹಕ್ಕೆ ಇಬ್ಬರು ಕಂದಮ್ಮಗಳು ಬಲಿ

(ನ್ಯೂಸ್ ಕಡಬ)newskadaba.com ಹಾವೇರಿ,ಮೇ.22 ಪತಿ-ಪತ್ನಿಯರ ನಡುವೆ ನಡೆಯುತ್ತಿದ್ದ ಜಗಳ ಹಾಗೂ ಸಂಶಯ ಎರಡು ಕಂದಮ್ಮಗಳನ್ನು ಬಲಿ ತೆಗೆದುಕೊಂಡ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರ ತಾಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದೆ. ಪತಿ ಮಂಜಯ್ಯ ಪಾಟೀಲಗೆ ಪತ್ನಿ ಸುನೀತಾ ಮೇಲೆ ಸಂಶಯ ಉಂಟಾಗಿದ್ದು, ನಿತ್ಯವೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಜಗಳದಿಂದ ಬೇಸತ್ತ ಸುನೀತಾ ಎರಡೂ ಮಕ್ಕಳನ್ನು ಕೊಠಡಿಯಲ್ಲಿ ನೇಣು ಹಾಕಿ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಈ ಸಮಯದಲ್ಲಿ ಸಾಯುವ ಸಂಕಟದಲ್ಲಿದ್ದ ಸುನೀತಾ ಚೀರಿದ್ದಾಳೆ. ತಕ್ಷಣ ಧಾವಿಸಿದ ಅತ್ತೆ-ಮಾವ ಆಕೆಯ ಜೀವ ಉಳಿಸಿದ್ದಾರೆ. ಆದರೆ, ಎರಡು ಕಂದಮ್ಮಗಳು ಮೃತಪಟ್ಟಿವೆ.

Also Read  ನಕ್ಷತ್ರ ಆಮೆ ಮಾರಾಟಟಕ್ಕೆ ಯತ್ನ ➤ ಪೋಲಿಸರ ಅತಿಥಿಯಾದ ಆರೋಪಿ

ಈ ನಡುವೆ ಪೋಲಿಸರಿಗೆ ಮಾಹಿತಿ ನೀಡದೆ ಕುಟುಂಬಸ್ಥರ ಸಮ್ಮುಖದಲ್ಲಿ ಮೃತ ಕಂದಮ್ಮಗಳ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಲಗೇರಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

error: Content is protected !!
Scroll to Top