ಕ್ಷುಲ್ಲಕ ಕಾರಣಕ್ಕಾಗಿ ಬಾಲಕರನ್ನು ಥಳಿಸಿ ಹೊಂಡಕ್ಕೆ ಎಸೆದ ವ್ಯಕ್ತಿ➤ಆರೋಪಿ ಪರಾರಿ

(ನ್ಯೂಸ್ ಕಡಬ)newskadaba.com ಪಾಟ್ನಾ,ಮೇ.22  ಕ್ಷುಲ್ಲಕ ಕಾರಣಕ್ಕಾಗಿ 12 ವರ್ಷದ ಬಾಲಕನನ್ನು ದಾರುಣವಾಗಿ ಥಳಿಸಿ ನೀರಿನ ಹೊಂಡಕ್ಕೆ ಎಸೆದಿರುವ ಘಟನೆ ಬಿಹಾರದ ಪಾಟ್ನಾ ಸಮೀಪದ ನಡೆದಿದೆ. ದೀಪಕ್​ ಹಾಗೂ ಆತನ ಸ್ನೇಹಿತರು ಸಾಯಂಕಾಲ ಬಯಲಿನಲ್ಲಿ ಆಟವಾಡುತ್ತಿದ್ದ ವೇಳೆ, ಅಲ್ಲಿಯೇ ಸಮೀಪದ ಮನೆಯೊಂದರ ಮರದಲ್ಲಿ ಲೀಚಿ ಹಣ್ಣು ನೋಡಿ ಕೂಡಲೇ ಮರವನ್ನು ಏರಲು ಯತ್ನಿಸಿದ್ದಾರೆ. ಮನೆಯ ಮಾಲೀಕ ಈ ಹುಡುಗರನ್ನು ದಾರುಣವಾಗಿ ಥಳಿಸಿ ನೀರಿನ ಹೊಂಡಕ್ಕೆ ಎಸೆದಿದ್ದಾನೆ.

ಭೀಕರವಾಗಿ ಗಾಯಗೊಂಡಿದ್ದ ಬಾಲಕರಿಬ್ಬರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತು.ನಂತರ ದೀಪಕ್​ ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇನ್ನೊಬ್ಬ ಬಾಲಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.ಮನೆ ಮಾಲೀಕ ಬೈತಾ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Also Read  ಆಟವಾಡಲು ತೆರಳಿದ್ದ ಶಾಲಾ ಬಾಲಕ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

 

error: Content is protected !!
Scroll to Top