(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.18. ತೆಂಗಿನ ಎಣ್ಣೆಯಿಂದ ಹಲ್ಲನ್ನು ಉಜ್ಜಿದರೆ ಹಲ್ಲುಗಳು ಇನ್ನಷ್ಟು ಬೆಳ್ಳಗಾಗುತ್ತಂತೆ. ತೆಂಗಿನ ಎಣ್ಣೆ ಕೂದಲಿಗೆ ಒಳ್ಳೆಯದಲ್ಲವೇ ಅದು ಎಲ್ಲರಿಗೂ ತಿಳಿದಿರುವ ವಿಷಯವೇ. ಕರಾವಳಿಯಲ್ಲಿ ತೆಂಗಿನ ಎಣ್ಣೆಯನ್ನು ಅಡುಗೆಗೆ ಸಹ ಬಳಸುತ್ತಾರೆ. ತೆಂಗಿನ ಎಣ್ಣೆಯನ್ನು ಹಲ್ಲುಜ್ಜಲು ಸಹ ಬಳಸಬಹುದು.
ಅದೇನೇ ಇರಲಿ ಸರಿಯಾದ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲ ಎಂದಾದಲ್ಲಿ ನಮ್ಮ ಹಲ್ಲುಗಳ ಅರೋಗ್ಯ ಹಾಳಾಗುತ್ತದೆ. ದಂತಕುಳಿ, ದಂತ ಸವಕಳಿ ಮತ್ತು ಹಲ್ಲು ನೋವು ಇತ್ಯಾದಿ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹಲ್ಲುನೋವು ತಾನೇ ಎಂದು ಉದಾಸೀನ ಮಾಡಲು ಹೋಗಬೇಡಿ. ಇನ್ನು ಈ ನೋವು ಹೃದ್ರೋಗ, ಡೆಮ್ನಿಷಿಯಾ ಮತ್ತು ಉಸಿರಾಟದ ಸಮಸ್ಯೆಗಳ ಜೊತೆಗೆ ತಳುಕು ಹಾಕಿಕೊಂಡಿರುತ್ತದೆ. ನಿಮ್ಮ ಸಾಮಾನ್ಯ ಟೂತ್ ಪೇಸ್ಟ್ ಈ ನಿಟ್ಟಿನಲ್ಲಿ ಸಹಾಯ ಮಾಡುವುದಿಲ್ಲ. ಅದರಲ್ಲಿಯೂ ನಮ್ಮಲ್ಲಿ ಬಹುತೇಕ ಜನ ಪ್ಲಾಸಿಂಗ್ ಸಹ ಮಾಡುವುದಿಲ್ಲ. ಹೀಗಾಗಿ ನಮ್ಮ ಬಾಯಿಯ ಅರೋಗ್ಯ ಹಾಳಾಗುವುದು ಸಹಜ. ತೆಂಗಿನ ಎಣ್ಣೆಯ ಪರಿಹಾರವನ್ನು ನೀವು ಮಾಡುವುದರಿಂದ ನಿಮ್ಮ ಹಲ್ಲುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಇದಕ್ಕಾಗಿ ನಿಮಗೆ ಮೂರು ಸ್ಪೂನ್ ತೆಂಗಿನ ಎಣ್ಣೆ, ಒಂದು ಹನಿ ಪುದೀನ ಎಣ್ಣೆ ಹಾಗೂ ಎರಡು ಸ್ಪೂನ್ ಬೇಕಿಂಗ್ ಸೋಡಾ ಅಂದರೆ ಅಡುಗೆ ಸೋಡಾ ಬೇಕಾಗುತ್ತದೆ. ಇನ್ನು ಈ ಎಲ್ಲ ಪದಾರ್ಥಗಳನ್ನು ತೆಗೆದುಕೊಂಡು ಚೆನ್ನಾಗಿ ಬೆರೆಸುವುದರಿಂದ ಒಂದು ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಇನ್ನು ಈ ಪೇಸ್ಟ್ ಅನ್ನು ನೀವು ಬ್ರಷ್ ಮಾಡುವಾಗ ಉಪಯೋಗಿಸಿ.
ಇನ್ನೊಂದು ವಿಧಾನ ಎಂದರೆ ತೆಂಗಿನ ಎಣ್ಣೆಯಿಂದ ಹದಿನೈದು ನಿಮಿಷಗಳ ಕಾಲ ಆಯಿಲ್ ಪುಲ್ಲಿಂಗ್ ಮಾಡಿ. ಹಲವಾರು ಅಧ್ಯಯನಗಳು ತೆಂಗಿನ ಎಣ್ಣೆ ಟೂತ್ ಪೇಸ್ಟ್ ಗೆ ಪರಿಣಮಕಾರಿಯಾದ ಬದಲಿ ಉತ್ಪನ್ನ ಎಂದು ಸಾಬೀತು ಮಾಡಿವೆ ಹಾಗೂ ಅದ್ರಲ್ಲಿ ಸ್ವಾಭಾವಿಕವಾದ ಆಂಟಿ ಬ್ಯಾಕ್ಟಿರಿಯಾ ಗುಣಗಳಿದ್ದು ಇದು ಅಪಾಯಕಾರಿ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತವೆ. ತೆಂಗಿನ ಎಣ್ಣೆಯು ದಂತ ಸವಕಳಿಯನ್ನು ಇನಿತರ ಓರಲ್ ಕ್ಲಿನಿಂಗ್ ಉತ್ಪನ್ನಗಳಿಗಿಂತ ಪರಿಣಾಮಕಾರಿಯಾಗಿ ತಡೆಯುತ್ತದೆ. ತೆಂಗಿನ ಎಣ್ಣೆಯು ಪ್ಲಾಕ್ ಉತ್ಪತ್ತಿ ಮಾಡುವುದನ್ನು ತಡೆಯುತ್ತದೆಯಂತೆ. ತೆಂಗಿನ ಎಣ್ಣೆಯನ್ನು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ವ್ಯತ್ಯಾಸವನ್ನು ಗಮನಿಸಿ. ಮಸಾಜ್ ಗಾಗಿ ಒಂಬತ್ತರಿಂದ ಹತ್ತು ನಿಮಿಷಗಳ ಸಮಯ ವೆಚ್ಚ ಮಾಡಬೇಕು. ಇನ್ನು ಟೂತ್ ಪೇಸ್ಟ್ ನಲ್ಲಿ ಟ್ರೈಕ್ಲೋಸೋನ್ ಎಂಬ ಆಂಟಿ ಬ್ಯಾಕ್ಟಿರಿಯಾ ಅಂಶ ಇರುತ್ತದೆ. ಇದರಲ್ಲಿರುವ ರಾಸಾಯನಿಕವು ದೇಹದಲ್ಲಿರುವ ಬ್ಯಾಕ್ಟಿರಿಯಾಗಳ ಮೇಲೆ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಹಾಗೂ ದೇಹದಲ್ಲಿರುವ ಎಂಡೋ ಕ್ರಯ್ನ್ ಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಟೂತ್ ಪೇಸ್ಟ್ ನಲ್ಲಿರುವ ಫ್ಲೋರೈಡ್ ಅಂಶವು ಸಹ ದೇಹಕ್ಕೆ ಒಳ್ಳೆಯದಲ್ಲ.
ಹೀಗೆ ನಮ್ಮ ಅರೋಗ್ಯ ನಮ್ಮ ಕೈಯಲ್ಲೇ ಇದೆ ಮುಖ್ಯವಾಗಿ ನಮಗೆ ಹೊಟ್ಟೆಗೆ ಆಹಾರ ಹೋಗಬೇಕಾದರೆ ನಮ್ಮ ಹಲ್ಲುಗಳು ಹಾಗೂ ಬಾಯಿ ಆರೋಗ್ಯಕರವಾಗಿ ಇರಬೇಕು. ಆದ್ದರಿಂದ ನಾವು ನಮ್ಮ ಬಾಯಿಯನ್ನು ಆರೋಗ್ಯಕರವಾಗಿ ಇಟ್ಕೊಬೇಕಾದರೆ ಇಂತಹ ಕೆಲವು ಉಪಾಯಗಳನ್ನು ತಿಳಿದ ಮೇಲೆ ಉಪಯೋಗಿಸಲೇ ಬೇಕಲ್ಲವೇ.
ಕೃಪೆ: ಅರಳಿಕಟ್ಟೆ